ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಇತ್ತೀಚಿಗೆ ಧನ್ಯಾ ರಾಮ್‌ಕುಮಾರ್ (Dhanya Ramkumar) ಅವರ ಹೊಸ ಚಿತ್ರಕ್ಕೆ ಸಾಥ್ ನೀಡುವ ಮೂಲಕ ಸುದ್ದಿಯಲ್ಲಿದ್ದರು. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹಾಗೆಯೇ ಫ್ಯಾನ್ಸ್‌ಗೆ ನಟ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಈ ವರ್ಷ ಜನವರಿಯಲ್ಲಿ ನಟ ಶ್ರೀಮುರಳಿ ಅವರಿಗೆ ‘ಬಘೀರ’ (Bhageera Film) ಸಿನಿಮಾದ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟಾಗಿತ್ತು. ರಾಕ್‌ಲೈನ್ ಸ್ಟುಡಿಯೋದಲ್ಲಿ ಸಿನಿಮಾಗಾಗಿ ಸ್ಟಂಟ್ಸ್ ಮಾಡುವ ವೇಳೆ ಶ್ರೀಮುರಳಿ ಅವರಿಗೆ ಗಾಯಗಳಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್
ಇತ್ತೀಚಿಗೆ ಕಾಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಎಲ್ಲಾ ನಿನಗಾಗಿ’ (Ella Ninagagi) ಚಿತ್ರದ ಟೈಟಲ್ ರಿವೀಲ್ ಮಾಡಿಕೊಡುವ ಮೂಲಕ ಧನ್ಯಾ ರಾಮ್‌ಕುಮಾರ್ ಟೀಂ ಶುಭಕೋರಿದ್ದರು. ಈ ವೇಳೆ ಶ್ರೀಮುರಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಬಹಳ ಕಷ್ಟವಾದ ಸ್ಟಂಟ್ಸ್‌ಗಳನೆಲ್ಲಾ ಆರಾಮಾಗಿ ಮಾಡಿದ್ದೇನೆ. ಆದರೆ ಈ ಸಣ್ಣ ಸ್ಟಂಟ್ ಮಾಡಲು ಹೋಗಿ 3 ತಿಂಗಳು ರೆಸ್ಟ್ ತೆಗೆದುಕೊಳ್ಳುವಂತಾಯ್ತು. ಈಗ ಚೇತರಿಸಿಕೊಂಡಿದ್ದೇನೆ. ಮೇ ಮೊದಲ ವಾರದಲ್ಲಿ ಮತ್ತೆ ಬಘೀರ ಸಿನಿಮಾದ ಚಿತ್ರೀಕರಣಕ್ಕೆ ಹೋಗಲಿದ್ದೇನೆ ಎಂದು ಸಿಹಿಸುದ್ದಿ ನೀಡಿದ್ದಾರೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಬಘೀರ’ ಚಿತ್ರದಲ್ಲಿ ಶ್ರೀಮುರಳಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ರುಕ್ಮಿಣಿ ವಸಂತ್ (Rukmini Vasanth) ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಜಿಎಫ್ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಬರೆದ ಕಥೆಗೆ ಡಾ.ಸೂರಿ ನಿರ್ದೇಶನ ಮಾಡ್ತಿದ್ದಾರೆ.