ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಇತ್ತೀಚಿಗೆ ಮಂಗಳೂರಿಗೆ (Mangaluru) ಬಂದಿದ್ದರು. ಈ ಬೆನ್ನಲ್ಲೇ ಶ್ರೀಲಂಕಾಗೆ (Srikanka) ನಟಿ ಪೂಜಾ ಹೆಗ್ಡೆ ಹಾರಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ನ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡೋದ್ರಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಿಲೀಸ್ ಬಳಿಕ ನಟಿ ಮಂಗಳೂರಿಗೆ ತೆರಳಿ ಕಾಡು ಮೇಡು ಸುತ್ತಿ, ಒಳ್ಳೆಯ ಮೀನೂಟ ಮಾಡಿ ಎಂಜಾಯ್ ಮಾಡಿದ್ದರು. ಇದನ್ನೂ ಓದಿ:ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು
View this post on Instagram
ಇದೀಗ ಮತ್ತೆ ಶ್ರೀಲಂಕಾಗೆ (Srilanka) ಪೂಜಾ ಹೆಗ್ಡೆ ತೆರಳಿದ್ದಾರೆ. ಸುಂದರ ತಾಣಗಳಿಗೆ ಭೇಟಿ ನೀಡ್ತಿದ್ದಾರೆ. ಶ್ರೀಲಂಕಾದ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ವೆಸ್ಟರ್ನ್ ಲುಕ್ ನಟಿ ಮಿಂಚಿದ್ದಾರೆ.
View this post on Instagram
ಪೂಜಾ ಹೆಗ್ಡೆ ಕೈಯಲ್ಲಿ, ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಪೂಜಾ ಕಾಣಿಸಿಕೊಳ್ತಿದ್ದಾರೆ.