ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್

Public TV
1 Min Read
VR SUDARSHAN

ಕೋಲಾರ: ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬೇಸರ ತರಿಸಿದೆ. ಹಾಗಾಗಿ ಚುನಾವಣಾ (Election) ರಾಜಕೀಯಕ್ಕೆ (Politics) ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ಮಾಜಿ ಸಭಾಪತಿ ಹಾಗೂ ಕೋಲಾರ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ವಿ.ಆರ್ ಸುದರ್ಶನ್ (V.R Sudarshan) ತಿಳಿಸಿದ್ದಾರೆ.

ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಯಾಗಿದ್ದಾಗಿನಿಂದ ಸಾರ್ವಜನಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. 1976 ರಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೆ. ಆದರೆ ಇನ್ನು ಮುಂದೆ ಜನಪರ ಹಾಗೂ ಸಂವಿಧಾನ ಬದ್ಧ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತೇನೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸೋಮಣ್ಣ ಹೊರಗಿನವ, ವರುಣಾದಲ್ಲಿ ಒಂದು ಮತವೂ ಬೀಳಲ್ಲ: ಸಿದ್ದು

ಹಲವು ದಿನಗಳಿಂದ ಈ ಕುರಿತು ಯೋಚನೆ ಮಾಡಿದ್ದೆ. ರಾಜಕೀಯ ನಿವೃತ್ತಿ ಹೊಂದಲು ಇದು ಒಳ್ಳೆಯ ಸಮಯ ಎಂದು ಈಗ ಘೋಷಣೆ ಮಾಡುತ್ತಿದ್ದೇನೆ. ಮುಂದಿನ ಬೆಳವಣಿಗೆ ಕುರಿತು ಏ.25 ರ ನಂತರ ಮಾತನಾಡುತ್ತೇನೆ. ಸೆಲ್ಯೂಟ್ ಟು ಕಾಂಗ್ರೆಸ್, ಬೆಸ್ಟ್ ವಿಷಸ್ ಟು ಪೀಪಲ್ ಆಫ್ ಕರ್ನಾಟಕ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಬಿ.ಎಲ್ ಸಂತೋಷ್ ಬುಲಾವ್

Share This Article