ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ (BJP) ಶಾಸಕ ಅನಿಲ್ ಬೆನಕೆಗೆ (Anil Benake) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಬುಲಾವ್ (B.L Santhosh) ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ (Belagavi) ಬೆಂಗಳೂರಿಗೆ (Bengaluru) ಶಾಸಕ ಅನಿಲ್ ಬೆನಕೆ ಪ್ರಯಾಣ ಬೆಳೆಸಿದ್ದು, ಪಕ್ಷದ ಮುಖಂಡರೊಂದಿಗೆ ಶನಿವಾರ ಚರ್ಚಿಸಲಿದ್ದಾರೆ.
ಅನಿಲ್ ಬೆನಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಲಿಂಗಾಯತ (Lingayats) ಸಮುದಾಯದ ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ಮಣೆ ಹಾಕಿದೆ. ಬಿಜೆಪಿ ನಾಯಕರ ನಿರ್ಧಾರಕ್ಕೆ ಅನಿಲ್ ಬೆನಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ಇದನ್ನೂ ಓದಿ: ಕನ್ನಡವೇ ಮೊದಲು, ರೈತ ಚೈತನ್ಯ – ಜೆಡಿಎಸ್‌ನಿಂದ ಭರವಸೆ ಪತ್ರ ಬಿಡುಗಡೆ
Advertisement
Advertisement
ಬೆಂಗಳೂರಿಗೆ ತೆರಳುವ ಮುನ್ನವೇ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಬೆನಕೆ, ಬಿಜೆಪಿ ಟಿಕೆಟ್ ಸಿಗಲಿ, ಬಿಡಲಿ ನಾನು ಈ ಬಾರಿ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷ ಎಂದು ನಿರ್ಧರಿಸಿಲ್ಲ. ಆದರೆ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಸೇರಿ ಹಲವು ಪಕ್ಷಗಳ ಜೊತೆ ಮಾತುಕತೆ ನಡೆದಿದೆ. ಈ ಮಧ್ಯೆಯೇ ಬಿ.ಎಲ್ ಸಂತೋಷ್ ಅವರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ನಾನು ಈಗ ಬೆಂಗಳೂರಿಗೆ ತೆರಳುತ್ತಿದ್ದೇನೆ. ನಮ್ಮ ನಾಯಕರ ಜೊತೆಗೆ ಚರ್ಚಿಸಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದರು. ಇದನ್ನೂ ಓದಿ: ಸೋಮಣ್ಣ ಹೊರಗಿನವ, ವರುಣಾದಲ್ಲಿ ಒಂದು ಮತವೂ ಬೀಳಲ್ಲ: ಸಿದ್ದು