ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ

Public TV
1 Min Read
Bengali Swastika 4

ಟಿ ಸ್ವಸ್ತಿಕಾ (Swastika) ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಆತನ ವಿರುದ್ಧ ದೂರು ಕೂಡ ನೀಡಿದ್ದಾರೆ. ಈ ದೂರು ಬೆಂಗಾಲಿ (Bengali) ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಿರ್ಮಾಪಕ ಸಂದೀಪ್ ಸರ್ಕಾರ್ (Sandeep) ಎನ್ನುವವರು ಯಾರು ಎಂಬುದು ಗೊತ್ತಿಲ್ಲದಿದ್ದರೂ, ಬೆದರಿಕೆಯ ಇ ಮೇಲ್ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Bengali Swastika 3

ಬೆಂಗಾಲಿ ನಟಿ ಸ್ವಸ್ತಿಕಾ ಇತ್ತೀಚೆಗಷ್ಟೇ ‘ಶಿಬ್ತುರ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ಮಾಪಕನೇ ಸಂದೀಪ್ ಸರ್ಕಾರ್. ಸಿನಿಮಾ ಮುಗಿಯುವತನಕ ಸಂದೀಪ್ ಒಂದು ಬಾರಿಯೂ ಆ ನಟಿಯೊಟ್ಟಿಗೆ ಮಾತನಾಡಿಲ್ಲವಂತೆ. ಮುಖ ಕೂಡ ನೋಡಿಲ್ಲವಂತೆ. ಸಿನಿಮಾ ಮುಗಿದ ನಂತರ ಇ ಮೇಲ್ ಮೂಲಕ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದಾರಂತೆ. ಅವರು ಅಮೆರಿಕಾದ ನಿವಾಸಿಯಾಗಿದ್ದು, ಅಲ್ಲಿಂದಲೇ ಹಲವು ಇಮೇಲ್ ಗಳನ್ನು ಬರೆದಿದ್ದಾರಂತೆ. ಇದನ್ನೂ ಓದಿ: ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

Bengali Swastika 1

ಸಿನಿಮಾ ಶೂಟಿಂಗ್ ಮುಗಿದ ನಂತರ ನನಗೆ ಇಮೇಲ್ ಮೂಲಕ ಸಂದೀಪ್ ಸಂಪರ್ಕಿಸಿದರು. ತಾವು ಅಮೆರಿಕಾ ನಿವಾಸಿಯಾಗಿದ್ದು, ತಮ್ಮೊಂದಿಗೆ ಸಹಕರಿಸಿದರೆ ಅಮೆರಿಕಾ ವೀಸಾ ಕೊಡಿಸುವೆ. ಅಲ್ಲದೇ, ತಮಗೆ ಪೊಲೀಸ್ ಅಧಿಕಾರಿಗಳು ಗೊತ್ತು, ಅವರಿಂದ ತೊಂದರೆ ಮಾಡಿಸುತ್ತೇನೆ. ಸಹಕರಿಸಿದರೆ ನಿಮಗೆ ಬೇಕಾದ ಸಹಾಯ ಮಾಡುವೆ ಎಂದು ಸಂದೀಪ್ ಆಮಿಷವೊಡ್ಡಿದ್ದಾನೆ ಎಂದು ನಟಿ ಹೇಳಿಕೊಂಡಿದ್ದಾರೆ.

Bengali Swastika 2

ಸ್ವಸ್ತಿಕಾಗೆ ಮಾತ್ರವಲ್ಲ ಅವರ ಮ್ಯಾನೇಜರ್ ಗೂ ಸಂದೀಪ್ ಬೆದರಿಕೆಯ  ಇ ಮೇಲ್ ಕಳುಹಿಸಿದ್ದಾನೆ ಎಂದು ದೆಹಲಿ (Delhi) ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಸ್ತಿಕಾ ತಿಳಿಸಿದ್ದಾರೆ. ನನ್ನ ಫೋಟೋ ಎಡಿಟ್ ಮಾಡಿ, ಇ ಮೇಲ್ ಹ್ಯಾಕ್ ಮಾಡುವುದಾಗಿಯೂ ಸಂದೀಪ್ ಬೆದರಿಸಿದ್ದಾನಂತೆ. ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Share This Article