ಅಯೋಧ್ಯೆ ದೇವಸ್ಥಾನ ಬಳಿ ವಾಸ್ತವ್ಯ ಹೂಡಿ – ಮನೆಯಿಲ್ಲ ಎಂದಿದ್ದ ರಾಗಾಗೆ ಅರ್ಚಕ ಆಹ್ವಾನ

Public TV
1 Min Read
rahul gandhi Hanumangarhi temple Mahant Sanjay Das

ಲಕ್ನೋ: ಕೆಲ ದಿನಗಳ ಹಿಂದೆ ನನಗೆ ಸ್ವಂತ ಮನೆಯಿಲ್ಲ ಎಂದಿದ್ದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi0 ಅವರನ್ನು ಅಯೋಧ್ಯೆ (Ayodhya) ದೇವಸ್ಥಾನದ (Temple) ಆವರಣದಲ್ಲಿ ವಾಸ್ತವ್ಯ ಹೂಡಿ ಎಂದು ಹನುಮಾನ್‍ಗರ್ಹಿ ದೇವಸ್ಥಾನದ ಅರ್ಚಕ ಮಹಂತ್ ಸಂಜಯ್ ದಾಸ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಹುಲ್ ಗಾಂಧಿಯನ್ನು ಹನುಮಾನ್‍ಗರ್ಹಿ ಮತ್ತು ಅಯೋಧ್ಯೆಗೆ ಸ್ವಾಗತಿಸುತ್ತೇವೆ. ಅವರಿಗೆ ಹನುಮಾನ್‍ಗರ್ಹಿ ದೇಗುಲದಲ್ಲಿ ತಂಗಲು ಅವಕಾಶ ನೀಡುತ್ತೇವೆ. ಅವರು ಇಲ್ಲಿಗೆ ಬಂದರೆ ನಾವು ಅವರಿಗೆ ನಮ್ಮ ಸ್ಥಾನವನ್ನು ನೀಡುತ್ತೇವೆ ಎಂದು ಹೇಳಿದರು.

RAHUL GANDHI 2

2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡರು. 2019ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮೋದಿ ಎಂಬ ಉಪನಾಮವನ್ನು ಬಳಸಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಿದ್ದಂತೆ ತಿಂಗಳೊಳಗೆ ದೆಹಲಿಯಲ್ಲಿರುವ ತುಘಲಕ್ ಲೇನ್ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿದೆ. ಮನೆ ಖಾಲಿ ಮಾಡುವುದಾಗಿ ರಾಹುಲ್ ಗಾಂಧಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: 47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್

Share This Article