ಶಿವಕುಮಾರ ಶ್ರೀಗಳ 116ನೇ ಜನ್ಮದಿನೋತ್ಸವ- ಸಿದ್ದಗಂಗಾ ಮಠದ ಗದ್ದುಗೆಯಲ್ಲಿ ಪೂಜೆ

Public TV
1 Min Read
TUMAKURU SIDDAGANGA MUTT

ತುಮಕೂರು: ಇಂದು ಸಿದ್ದಗಂಗಾ ಮಠ (Siddaganga Mutt) ದ ಶಿವಕುಮಾರ ಶ್ರೀಗಳ 116 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಸಿದ್ದಲಿಂಗ ಸ್ವಾಮೀಜಿಯವರು ಶಿವಕುಮಾರ ಶ್ರೀ (Shivakumara Shree)ಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮಂತ್ರಘೋಷಗಳಿಂದ ಪೂಜೆ ನಡೆಯಿತು. ಗದ್ದುಗೆಗೆ ಫಲ-ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳಲ್ಲಿ 3 ಪಕ್ಷಗಳಿಂದ ಒಕ್ಕಲಿಗರೇ ಅಭ್ಯರ್ಥಿಗಳು

TUMAKURU SIDDAGANGA MUTT 1

ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಪ್ರತಿಮೆ ಇಟ್ಟು ಮೆರವಣಿಗೆ ಮಾಡಲಾಯಿತು. ಬೆಳಗ್ಗೆ 11 ಗಂಟೆಗೆ ಶ್ರೀ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ನೀತಿ ಸಂಹಿತೆ ಇರುವುದರಿಂದ ರಾಜಕಾರಣಿಗಳಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ರಾಜಕರಣಿಗಳು, ಜನಪ್ರತಿನಿಧಿಗಳು ಭಾಗಿಯಾಗಿಲ್ಲ. ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ, ಸುತ್ತೂರು ಮಠದ ಶ್ರೀ ಗಳ ಸಾನಿಧ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ (Thawar Chand Gehlot), ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಭಕ್ತರು ಭಾಗಿಯಾದರು. ಪರಮಪೂಜ್ಯರ ಪುಣ್ಯದ ಕಾರ್ಯಗಳನ್ನು ಶ್ರೀಮಠ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

TUMAKURU SIDDAGANGA MUTT 2

ಶಿವೈಕ್ಯ ಶಿವಕುಮಾರ ಶ್ರೀಗಳ 116 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ 116 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಮಾಡಲಾಯಿತು. ವಜ್ರಮಹೋತ್ಸವ ಕಟ್ಟಡದ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಗಂಡು ಮಗುವಿಗೆ ಶಿವಕುಮಾರ ಎಂದು, ಹೆಣ್ಣು ಮಗುವಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಒಟ್ಟು 116 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ ಮಾಡಲಾಯಿತು. ನಾಮಕರಣವಾದ ಮಗುವಿಗೆ ತೊಟ್ಟಿಲು ಹಾಗೂ ಬಟ್ಟೆ ವಿತರಣೆ ಮಾಡಲಾಯಿತು.

Share This Article