ಬೆಂಗಳೂರು: ಚುನಾವಣೆ ಘೋಷಣೆ ಆಯ್ತು. ಇದೀಗ ಜೆಡಿಎಸ್ (JDS) ಗೆ ಅಗ್ನಿ ಪರೀಕ್ಷೆ ಶುರುವಾಗಿದೆ. ಹಳೆ ಮೈಸೂರು (Old Mysuru) ಭಾಗದಲ್ಲಿ ಹಳೇ ಫಸಲು ಉಳಿಸಿಕೊಳ್ಳುವುದೇ ಸವಾಲಾಗಿದೆ.
ಜೆಡಿಎಸ್ ಮುಂದಿರೋ ಸವಾಲುಗಳೇನು?: ಹೆಚ್‍ಡಿಡಿ (HD Devegowda), ಹೆಚ್‍ಡಿಕೆ (HD Kumaraswamy) ಬಿಟ್ಟು ಜೆಡಿಎಸ್‍ಗೆ ಮತ ತಂದುಕೊಡುವ ನಾಯಕರು ಪಕ್ಷದಲ್ಲಿ ಇಲ್ಲದೆ ಇರೋದು. ಹಳೆ ಮೈಸೂರು ಭಾಗದಲ್ಲಿ ಕಳೆದ ಬಾರಿ ಜೆಡಿಎಸ್ ಭರ್ಜರಿ ಗೆಲುವು ಪಡೆದಿತ್ತು. ಈ ಬಾರಿ ಇದನ್ನ ಉಳಿಸಿಕೊಳ್ಳೊದೇ ದೊಡ್ಡ ಸವಾಲಾಗಿದೆ.
ಜೆಡಿಎಸ್‍ಗೆ ಕಾಂಗ್ರೆಸ್ ಮತ್ತು ಬಿಜೆಪಿ (BJP) ಯಿಂದ ಪ್ರಬಲ ಪೈಪೋಟಿ ಇದೆ. ಹೀಗಾಗಿ ಭದ್ರಕೋಟೆ ಉಳಿಸಿಕೊಳ್ಳೋದು ಜೆಡಿಎಸ್‍ಗೆ ಸವಾಲಾಗಿದೆ. ಯಾಕಂದರೆ ಜನ ಕುಮಾರಸ್ವಾಮಿ ಮತ್ತು ದೇವೇಗೌಡರನ್ನ ಮಾತ್ರ ಹೆಚ್ಚು ನೆಚ್ಚಿಕೊಂಡಿದ್ದಾರೆ. ದೇವೇಗೌಡರ ಆರೋಗ್ಯ ಸರಿ ಇಲ್ಲದೆ ಎಲ್ಲಾ ಭಾಗದಲ್ಲಿ ಪ್ರಚಾರ ಕಷ್ಟ. ಇದು ಕೂಡ ಹಿನ್ನಡೆ ಆಗಬಹುದು. ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ
ಬಿಜೆಪಿ, ಕಾಂಗ್ರೆಸ್ ಹಾಗೆ ಪಕ್ಷದಲ್ಲಿ 2ನೇ ಹಂತದ ನಾಯಕರ ಕೊರತೆಯಿಂದ ಪ್ರಚಾರಕ್ಕೆ ತೊಂದರೆಯಾಗಬಹುದು. ಹಳೇ ಮೈಸೂರು ಭಾಗ ಬಿಟ್ಟರೆ ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಇಲ್ಲ. ಕಾಂಗ್ರೆಸ್, ಬಿಜೆಪಿಯಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಇದೆ. ಬಿಜೆಪಿ-ಕಾಂಗ್ರೆಸ್‍ನಂತೆ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿಂದೆ ಉಳಿದಿದೆ. ಅಲ್ಲದೆ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೆ ಕೊರತೆ ಇರುವುದು ಜೆಡಿಎಸ್‍ಗೆ ಸವಾಲಾಗಿದೆ.


