ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

Public TV
1 Min Read
r chandru

ರ್.ಚಂದ್ರು (R.Chandru) ಮತ್ತು ರಿಯಲ್ ಸ್ಟಾರ್ ಉಪೇಂದ್ರ (Upendra) ಕಾಂಬಿನೇಷನ್‌ನಲ್ಲಿ ಮೂಡಿ ಬಂದ `ಕಬ್ಜ’ 3ನೇ (Kabzaa) ಸಿನಿಮಾ ಇದಾಗಿದ್ದು, ಅಪ್ಪು ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ ತೆರೆಗೆ ಅಪ್ಪಳಿಸಿದೆ. ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ. ಹೀಗಿರುವಾಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ತೆಲುಗಿನ ಸೂಪರ್ ಸ್ಟಾರ್‌ಗೆ ಆರ್.ಚಂದ್ರು ನಿರ್ದೇಶನ ಮಾಡಲಿದ್ದಾರೆ.

Kabzaa 4 1

ಮಾರ್ಚ್ 16ರಂದು ಉಪ್ಪಿ, ಕೆ.ಪಿ ಶ್ರೀಕಾಂತ್ ಜೊತೆ ಆರ್.ಚಂದ್ರು ತಿರುಪತಿಗೆ ಭೇಟಿ ಕೊಟ್ಟಿದ್ದರು. `ಕಬ್ಜ’ ಸಿನಿಮಾ ರಿಲೀಸ್‌ಗೂ ಮುನ್ನವೇ ವಿಶೇಷ ಪೂಜೆ ಮಾಡಿಸಿದ್ದರು. ದೇವರ ದರ್ಶನ ಪಡೆದ ನಂತರ ಪವನ್ ಕಲ್ಯಾಣ್ (Pawan Kalyan)  ಅವರನ್ನ ಆರ್.ಚಂದ್ರು ಭೇಟಿಯಾಗಿದ್ದಾರೆ. `ಕಬ್ಜ’ ಸಿನಿಮಾವನ್ನ ಅವರಿಗೆ ತೋರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ `ಕಬ್ಜ’ ಚಿತ್ರವನ್ನ ನೋಡಿ ಇಷ್ಟಪಟ್ಟಿದ್ದಾರೆ. ಹಾಗಾಗಿ ಆರ್.ಚಂದ್ರು ಜೊತೆ ಸಿನಿಮಾ ಮಾಡುವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ

Kabzaa 1 4

ಪವನ್ ಕಲ್ಯಾಣ್ ಅವರು ಮಾಸ್, ರಗಡ್ ಪಾತ್ರದ ಮೂಲಕ ಈಗಾಗಲೇ ಮನಗೆದ್ದಿದ್ದಾರೆ. ಈಗ ಆರ್.ಚಂದ್ರು ಕೂಡ ಅಂತಹದ್ದೇ ಮಾಸ್ ಚಿತ್ರ ಮಾಡಲು ಹೊರಟಿದ್ದಾರೆ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

ಸದ್ಯ `ಕಬ್ಜ’ (Kabzaa) ಮೂಲಕ ಮಲ್ಟಿಸ್ಟಾರ್ ಸಿನಿಮಾ ಮಾಡಿ ಗಮನ ಸೆಳೆದಿರುವ ಆರ್.ಚಂದ್ರು, ಇದೀಗ ಹೊಸ ಬಗೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *