‘ಆಸ್ಕರ್’ ಪಡೆದ ನಂತರ ತವರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್ : ಅದ್ಧೂರಿ ಸ್ವಾಗತ

Public TV
2 Min Read
Jr NTR

ಳೆದೊಂದು ವಾರದಿಂದ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದ ಆರ್.ಆರ್.ಆರ್ (RRR) ಚಿತ್ರತಂಡ ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮುಗಿಸಿಕೊಂಡು ಇಂದು ಬೆಳಗ್ಗೆ ಹೈದರಾಬಾದ್ ಗೆ (Hyderabad) ಆಗಮಿಸಿದೆ. ಹೈದರಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ವಿಷಯವನ್ನು ತಿಳಿದ ಅಭಿಮಾನಿಗಳು ಏರ್ ಪೋರ್ಟ್ ಮುಂದೆ ಜಮಾಯಿಸಿದ್ದರು. ಜ್ಯೂನಿಯರ್ ಎನ್.ಟಿ.ಆರ್ (Jr NTR), ರಾಮ್ ಚರಣ್ ತೇಜ ಸೇರಿದಂತೆ ಹಲವರಿಗೆ ಜಯಘೋಷ ಹಾಕಿ, ಅಭಿನಂದಿಸಿದ್ದರು. ಮುಗಿ ಬಿದ್ದು ಸೆಲ್ಫಿ ಕೂಡ ತಗೆದುಕೊಂಡರು.

RRR 2

ನಾಟು ನಾಟು (Natu Natu) ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗುತ್ತಿದ್ದಂತೆಯೇ ಜಗತ್ತೇ ಆರ್.ಆರ್.ಆರ್ ತಂಡವನ್ನು ಅಭಿನಂದಿಸಿದೆ. ಈ ನಡುವೆ ಆರ್.ಆರ್.ಆರ್ ಅನ್ನು ವಿರೋಧಿಸಿದ್ದ ಹಲವರಿಗೆ ಪ್ರಶ್ನೆ ಕೇಳುವ ಮೂಲಕ ಟಾಂಗ್ ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ನಟ ಪ್ರಕಾಶ್ ರೈ ಮತ್ತು ರಮ್ಯಾ. ‘ನಾಟು ನಾಟು’ ಹಾಡಿಗೆ ಆಸ್ಕರ್ ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ ಸೇರಿದಂತೆ ಕೆಲ ನಟರು ಆಸ್ಕರ್ ‍ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

rrr 1

ನಟಿ ರಮ್ಯಾ ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ.

rrr

ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *