ಹಿಂದಿಯ ಪ್ರಸಿದ್ಧ ಧಾರಾವಾಹಿ (Serial) ಸೆಟ್ (Set) ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಇಡೀ ಸೆಟ್ ಬೆಂಕಿ ಆಹುತಿಯಾಗಿದೆ. ಹಿಂದಿಯ ಗಮ್ ಹೈ ಕಿಸೀಕೆ ಪ್ಯಾರ್ ಮೈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಮಾರ್ಚ್ 10ರಂದು ಸೆಟ್ ನಲ್ಲಿದ್ದ ಸಿಲಿಂಡರ್ (Cylinder Blast) ಸ್ಫೋಟವಾಗಿದೆ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಡೆದ ಘಟನೆಯಲ್ಲಿ ಪೂರ್ತಿ ಸೆಟ್ ಬೆಂಕಿಯಲ್ಲಿ ಭಸ್ಮವಾಗಿದೆ.

ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಅಲಿಂದ ಬಚಾವ್ ಮಾಡಲಾಗಿದೆ. ಪಕ್ಕದಲ್ಲೇ ಮತ್ತೊಂದು ಧಾರಾವಾಹಿಯ ಸೆಟ್ ಕೂಡ ಹಾಕಲಾಗಿತ್ತು. ಅದಕ್ಕೂ ಹಾನಿಯಾಗಿದೆ ಎಂದಿದೆ ಧಾರಾವಾಹಿ ತಂಡ.
