ಕನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಧಮಾಕ’ (Dhamaka) ಚಿತ್ರದ ಸೂಪರ್ ಸಕ್ಸಸ್ ನಂತರ ಬಾಲಯ್ಯ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಜೋಶ್ʼ ನಟಿ ಸ್ನೇಹಾ ಆಚಾರ್ಯ
ಕಿಸ್, ಭರಾಟೆ, ಬೈ ಟು ಲವ್, ಕನ್ನಡದ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಸಿನಿಮಾ ರಂಗದಲ್ಲಿ ಬೆಳಗುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಸೆಡ್ಡು ಹೊಡೆದು ಸಾಲು ಸಾಲು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗುತ್ತಿದ್ದಾರೆ. `ಧಮಾಕ’ (Dhamaka) ಚಿತ್ರದ ಸಕ್ಸಸ್ ನಂತರ ನಟಿಯ ಕೈಯಲ್ಲಿ ಏಳು ಸಿನಿಮಾಗಳಿವೆ.
ಬಾಲಯ್ಯ (Balayya) ನಟನೆಯ ಚಿತ್ರದಲ್ಲಿ ಶ್ರೀಲೀಲಾ (Sreeleela) ನಟಿಸುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಅಧಿಕೃತ ಮಾಹಿತಿ ಹೊರ ಬಿದ್ದಿರಲ್ಲಿಲ್ಲ. ಇದೀಗ ನಟಿ ಶ್ರೀಲೀಲಾ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ನಂದಮೂರಿ ಬಾಲಯ್ಯ (Nandamuri Balayya) ಜೊತೆ ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ತಿಳಿಸಿದ್ದಾರೆ.
View this post on Instagram
ಚಿತ್ರದಲ್ಲಿ ಬಾಲಯ್ಯ ಅವರ ತಂಗಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಅನಿಲ್ ರವಿಪುಡಿ ನಿರ್ದೇಶನದ NBK 108 ಚಿತ್ರದಲ್ಲಿ ತ್ರಿಷಾ, ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.