ಭೋಪಾಲ್: ಹಿರಿಯ ಕಾಂಗ್ರೆಸ್ (Congress) ನಾಯಕ ದಿಗ್ವಿಜಯ್ ಸಿಂಗ್ (Digvijaya Singh) ಪ್ರಯಾಣಿಸುತ್ತಿದ್ದ ಕಾರು (Car) ವೇಗವಾಗಿ ಬಂದು ಬೈಕ್‌ಗೆ (Bike) ಡಿಕ್ಕಿ ಹೊಡೆದಿರುವ ಘಟನೆ ಗುರುವಾರ ಮಧ್ಯಪ್ರದೇಶದ (Madhya Pradesh) ರಾಜ್‌ಗಢದಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ದೂರಕ್ಕೆ ಚಿಮ್ಮಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಿಗ್ವಿಜಯ್ ಸಿಂಗ್ ಪ್ರಯಾಣಿಸುತ್ತಿದ್ದಾಗ ಬೈಕ್ ಸವಾರ ರಸ್ತೆ ದಾಡಲು ಯೂ ಟರ್ನ್ ತೆಗೆದುಕೊಂಡಿರುವುದು ಕಂಡುಬಂದಿದೆ. ಈ ವೇಳೆ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನನ್ನು ರಾಂಬಾಬು ಬಗ್ರಿ (20) ಎಂದು ಗುರುತಿಸಲಾಗಿದೆ.
ಘಟನೆ ಜಿರಾಪುರದಲ್ಲಿ ನಡೆದಿದೆ. ಅಪಘಾತ ಸಂಭವಿಸುತ್ತಲೇ ಮಾಜಿ ಸಂಸದ ಗಾಯಾಳುವಿನ ಸಹಾಯಕ್ಕೆ ಧಾವಿಸಿದ್ದಾರೆ. ಬಳಿಕ ಪ್ರಾಥಮಿಕ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಆತನನ್ನು ಭೋಪಾಲ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ- CBIವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ
कार से टक्कर लगने के बाद साइकिल/मोटरसाइकिल सवार/पैदल चलने वाले को छोड़कर भागें नहीं बल्कि उसे उठाकर अस्पताल पहुंचाएं, भले ही गलती उसकी ही हो क्योंकि जान कीमती है।बाकी हिसाब बाद में हो जाएगा। ठीक ऐसा ही किया @digvijaya_28 ने , देखिए pic.twitter.com/C6pxbixfZZ
— Arun Kumar Singh (@arunsingh4775) March 9, 2023
ಸದ್ಯ ಅಪಘಾತದ ಬಳಿಕ ಸಿಂಗ್ ಗಾಯಾಳುವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ. ರಾತ್ರಿಯೂ ಕೂಡಾ ಸಿಂಗ್ ಭೋಪಾಲ್‌ನ ಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಬೈಕ್ ಸವಾರನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವಾಹನ ನಿಧಾನವಾಗಿ ಚಲಿಸುತ್ತಿದ್ದರಿಂದ ಸದ್ಯ ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಂತಿದ್ದ BMTC ಬಸ್ಸಿನಲ್ಲಿ ಬೆಂಕಿ- ಮಲಗಿದ್ದಲ್ಲೇ ಕಂಡಕ್ಟರ್ ಸಜೀವ ದಹನ
ಘಟನೆ ಜಿರಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.