ಬೀಜಿಂಗ್: ಚೀನಾ ಸರ್ಕಾರವು (China Government) ಮಹಿಳಾ ಮಾಡೆಲ್‌ಗಳು (Women Modeling) ಆನ್‌ಲೈನ್‌ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್‌ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ.
ಬ್ರಾ ದಿಂದ ನೈಟ್‌ಗೌನ್ ವರೆಗಿನ ಎಲ್ಲ ರೀತಿಯ ಒಳ ಉಡುಪುಗಳ ಜಾಹೀರಾತಿಗೆ ಪುರುಷರನ್ನ ನಿಯೋಜನೆ ಮಾಡಲಾಗುತ್ತಿದೆ. ಮಹಿಳೆಯರ ಒಳ ಉಡುಪುಗಳನ್ನ ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್‌ಸ್ಟ್ರೀಮ್ ಪ್ರಸಾರದ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕೆಲ ಪುರುಷ ಮಾಡೆಲ್‌ಗಳು ಕ್ಯಾಟ್ ಇಯರ್ ಹೆಡ್‌ಬ್ಯಾಂಡ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು `ಸೈತಾನ್’ಗೆ ಹೋಲಿಸಿದ ಪಾಕ್ ಮಾಜಿ ಕ್ರಿಕೆಟಿಗ – ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ಪುರುಷ ಮಾಡೆಲ್‌ಗಳಿಂದ ಮಹಿಳೆಯರ ಒಳ ಉಡುಪು ಪ್ರದರ್ಶಿಸುವ ಮೂಲಕ ಚೀನಾ ಸರ್ಕಾರ ಟೀಕೆಗೆ ಗುರಿಯಾಗಿದೆ. ಕೆಲವರು ಇದಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ
ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಲೈವ್‌ಸ್ಟ್ರೀಮ್ ಇ-ಕಾಮರ್ಸ್ (Livestreaming E-Commerce) ಬಳಕೆದಾರರ ಸಂಖ್ಯೆ 46 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.