ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

Public TV
2 Min Read
Mangaluru blast Case Trget was a temple in Kadri Islamic Resistance Council

ಬೆಂಗಳೂರು: ಕದ್ರಿ ದೇವಸ್ಥಾನವೇ (Kadri Temple) ಮಂಗಳೂರು (Mangaluru) ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‍ನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಮಂಗಳೂರಿನ ಪಂಪ್‍ವೆಲ್, ರೈಲ್ವೇ ನಿಲ್ದಾಣ, ಆರ್‌ಎಸ್‌ಎಸ್ ಕಚೇರಿ ಶಾರೀಕ್‍ನ (Shariq) ಟಾರ್ಗೆಟ್ ಆಗಿರಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಈಗ ಕದ್ರಿ ದೇವಸ್ಥಾನವೇ ಆತನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Mangaluru Blast Case The Shariq cooker bomb capable of blowing up the bus FSL Investigation report 1

ಎರಡೂವರೆ ತಿಂಗಳ ಚಿಕಿತ್ಸೆಯ ಬಳಿಕ ಶಾರೀಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾರ್ಚ್ 6 ರಂದು ಬಿಡುಗಡೆಯಾಗಿದ್ದ. ಸದ್ಯ ಎನ್‍ಐಎ ಕಸ್ಟಡಿಯಲ್ಲಿರುವ ಶಾರೀಕ್‍ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‍ನಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದೆ ಎಂಬ ವಿಚಾರವನ್ನು ಶಾರೀಕ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈಗ ಎನ್‍ಐಎ (NIA) ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಲು ಸಿದ್ದತೆ ನಡೆಸಿದ್ದಾರೆ. ಅದರ ಜೊತೆಯಲ್ಲಿ ಜೈಲಿನಲ್ಲಿರೋ ಮತ್ತಿಬ್ಬರು ಶಂಕಿತ ಉಗ್ರ ಮಾಜ್ ಹಾಗೂ ಯಾಸಿರ್‍ನನ್ನು ಕಸ್ಟಡಿಗೆ ಪಡೆಯುವ ನಿರ್ಧಾರ ಮಾಡಿದ್ದಾರೆ.

Kadri Manjunatha Temple 2

ಮಂಗಳೂರು ಪ್ರಕರಣದ ವಿಚಾರಣೆಯ ಬಳಿಕ ಶಾರೀಖ್‍ನನ್ನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಸಲಿದೆ. ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಇದುವರೆಗೂ ಎಂಟು ಜನರನ್ನು ಬಂಧಿಸಿರೋ ಎನ್‍ಐಎ ತಂಡ ವಿಚಾರಣೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಶಾರೀಖ್ ಕೈವಾಡದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರೀಖ್‍ಗೂ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಯಲಿದೆ. ನಂತರ ಮಾಜ್ ಹಾಗೂ ಯಾಸಿರ್‍ನನ್ನು ಭೇಟಿ ಮಾಡಿಸಲು ನಿರ್ಧರಿಸಿದೆ.

ತನಿಖೆಯಲ್ಲಿ ಬೇರೆ ಬೇರೆ ಸ್ನೇಹಿತರ ಹೆಸರು, ವಿಳಾಸ ಬಳಸಿ ಅಮೆಜಾನ್ ಮೂಲಕ ಸ್ಪೋಟಕ ಕಚ್ಚ ವಸ್ತು ಖರೀದಿಸಿದ್ದಾಗಿ ತಿಳಿದು ಬಂದಿದೆ. ಆರೋಪಿ ಬಳಿ ಸಿಕ್ಕ ಪ್ರೇಮ್ ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ವಿಳಾಸ ಸಹ ಸ್ಪೋಟಕ ಸಾಮಗ್ರಿ ಖರೀದಿಗೆ ಬಳಕೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಅಮೇಜಾನ್ (Amazon) ಡೆಲಿವರಿ ಕೊಟ್ಟ ಬಳಿಕ ಸ್ಪೋಟಕ ವಸ್ತುಗಳು ನಾಲ್ಕೈದು ಕೈ ಬದಲಾಯಿಸಿ ಕೊನೆಗೆ ಶಾರೀಖ್‍ನನ್ನು ತಲುಪುತ್ತಿದ್ದ ವಿಚಾರವೂ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

Share This Article
Leave a Comment

Leave a Reply

Your email address will not be published. Required fields are marked *