ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್ (Sushmitha Sen) ಅವರಿಗೆ ಕೆಲವೇ ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ನಟಿ ತಿಳಿಸಿದ್ದರು. ಇದೀಗ ಸರ್ಜರಿ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೃದಯಾಘಾತ ಆದ ಬಳಿಕ ಮೊದಲ ಬಾರಿಗೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಲೈವ್‌ಗೆ ಬಂದಿದ್ದಾರೆ. ಹೃದಯಾಘಾರದಿಂದ ಬದುಕುಳಿದ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ
ಸಾಕಷ್ಟು ಸೆಲೆಬ್ರಿಗಳು ಇತ್ತೀಚಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್‌ಗೆ ಹೋಗಿ ಫಿಟ್ ಆಗಿದ್ದರೂ ಕೂಡ ಹಾರ್ಟ್ ಆಟ್ಯಾಕ್‌ನಿಂದ (Heart Attack) ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅದೆಷ್ಟೋ ಮಂದಿ ಜಿಮ್- ವರ್ಕೌಟ್ ಬಗ್ಗೆ ದೂರಿದ್ದುಯಿದೆ. ಈ ವಿಚಾರವಾಗಿ ನಟಿ ಕೂಡ ಲೈವ್‌ನಲ್ಲಿ ಮಾತನಾಡಿದ್ದಾರೆ.
ನಿಮ್ಮಲ್ಲಿ ಬಹುತೇಕ ಜನರು ಜಿಮ್‌ಗೆ ಹೋಗೋದನ್ನು ನಿಲ್ಲಿಸುತ್ತೀರಿ ಅಂತ ನನಗೆ ಗೊತ್ತು. ಜಿಮ್‌ಗೆ ಹೋದರೂ ಆಕೆಗೆ ಏನೂ ಉಪಯೋಗ ಆಗಲಿಲ್ಲ ನೋಡು ಅಂತ ಮಾತಾಡಿಕೊಳ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್ ಮಾಡುವುದು ನನಗೆ ಉಪಯೋಗಕ್ಕೆ ಬಂದಿದೆ. ನಾನು ಬದುಕುಳಿದಿದ್ದು ಭೀಕರ ಹೃದಯಾಘಾತದಿಂದ. ನನ್ನ ಹೃದಯದಲ್ಲಿ ಶೇಕಡ 95ರಷ್ಟು ಬ್ಲಾಕೇಜ್ ಇತ್ತು. ನನ್ನ ಜೀವನದಲ್ಲಿ ಕ್ರಿಯಾಶೀಲತೆ ಇದ್ದಿದ್ದರಿಂದಲೇ ನಾನು ಬದುಕಿದೆ ಎಂದಿದ್ದಾರೆ ಸುಶ್ಮಿತಾ ಸೇನ್.
View this post on Instagram
ಇನ್ಸ್ಟಾಗ್ರಾಂ ಲೈವ್‌ಗೆ ಬಂದಿದ್ದ ಸುಶ್ಮಿತಾ ಸೇನ್ ಅವರು ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರ್ಜರಿ ಬಳಿಕ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಸುಶ್ಮಿತಾ ಸೇನ್ ಧನ್ಯವಾದ ತಿಳಿಸಿದ್ದಾರೆ.