Exclusive:`ಭೀಮ’ ಬಳಿಕ ದುನಿಯಾ ವಿಜಯ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್

Public TV
2 Min Read
duniya vijay 2

ಸ್ಯಾಂಡಲ್‌ವುಡ್ (Sandalwood)  `ಸಲಗ’ (Salaga) ದುನಿಯಾ ವಿಜಯ್ (Duniya Vijay) ಪ್ರತಿಭಾನ್ವಿತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಮತ್ತು ತೆಲುಗಿನಲ್ಲಿ ದುನಿಯಾ ವಿಜಯ್ ತಮ್ಮ ನಟನೆಯ ಮೂಲಕ ಕಿಡಿ ಹಚ್ಚಿದ್ದಾರೆ. ಸದ್ಯ `ಭೀಮ’ (Bheema) ಚಿತ್ರದ ನಂತರ ದುನಿಯಾ ವಿಜಯ್ ಏನ್ಮಾಡ್ತಾರೆ, ಅವರ ಮುಂದಿನ ಸಿನಿಮಾ ಯಾವುದು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. `ಸಲಗ’ನ ಮುಂದಿನ ಹೆಜ್ಜೆ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

duniya vijay 2

`ಸಲಗ’ ಸಕ್ಸಸ್ ನಂತರ ದುನಿಯಾ ವಿಜಯ್ ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಅದರಲ್ಲೂ ಬಾಲಯ್ಯ ಮುಂದೆ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದಲ್ಲಿ ಅಬ್ಬರಿಸದ ಮೇಲೆ ದುನಿಯಾ ವಿಜಯ್ ಮೇಲಿನ ಕ್ರೇಜ್ ಡಬಲ್ ಆಗಿದೆ. `ಭೀಮ’ ಚಿತ್ರದ ಲುಕ್‌ನಿಂದಲೇ ವಿಜಯ್ ಈಗಾಗಲೇ ಕ್ರೇಜ್ ಹುಟ್ಟು ಹಾಕಿದ್ದಾರೆ. ಹೀಗಿರುವಾಗ `ಭೀಮ’ ಬಳಿಕ `ಗುರು ಶಿಷ್ಯರು’ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಜೊತೆ ಸಿನಿಮಾ ಮಾಡಲು ವಿಜಯ್ ಕೈಜೋಡಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಜಡೇಶ್ ಕುಮಾರ್ (Jadesh Kumar) ಮಾಹಿತಿ ನೀಡಿದ್ದಾರೆ.

DUNIYA VIJAY

ನಿರ್ದೇಶಕ ಜಡೇಶ್-ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ 1950ರ ಕಾಲಘಟ್ಟದ ಕಥೆ ಮೂಡಿ ಬರಲಿದೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನರ ಮನಸ್ಥಿತಿ ಹೇಗಿತ್ತು. ಅವರ ಮುಗ್ಧತೆ ಮತ್ತು ಆಲೋಚನೆ ಹೇಗಿತ್ತು ಎಂಬುದನ್ನ ಈ ಸಿನಿಮಾ ತೆರೆಯ ಮೇಲೆ ತೋರಿಸಿಕೊಡಲಿದೆ. ದುನಿಯಾ (Duniya Film) ಚಿತ್ರದಲ್ಲಿ ವಿಜಯ್ ಮುಗ್ಧನಾಗಿ ಅದ್ಭುತವಾಗಿ ನಟಿಸಿದ್ದರು. ಕೊಂಚ ಅದೇ ಶೇಡ್‌ನಲ್ಲಿ ಇಲ್ಲಿ ವಿಜಯ್ ನಟಿಸಲಿದ್ದಾರೆ.

1950ರ ಕಾಲಘಟ್ಟದ ಕಥೆಯಾಗಿರುವ ಕಾರಣ, ಹಳ್ಳಿ ಸೊಗಡಿನ ಅದ್ದೂರಿ ಸೆಟ್ ಅನ್ನೇ ಹಾಕಲಾಗುತ್ತದೆ. ಖಡಕ್ ಪಾತ್ರಗಳಲ್ಲಿ ದುನಿಯಾ ವಿಜಯ್ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ವಿಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗುತ್ತಿದ್ದಾರೆ. `ಭೀಮ’ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಳಿಕ ಮೇ ಅಂತ್ಯದಲ್ಲಿ ಹೊಸ ಚಿತ್ರವನ್ನು ವಿಜಯ್ ಕೈಗೆತ್ತಿಕೊಳ್ಳಲಿದ್ದಾರೆ. ಜೊತೆಗೆ ಈ ಚಿತ್ರವನ್ನ ʻಭೀಮʼ ಸಿನಿಮಾದ ನಿರ್ದೇಶಕರಾದ ಕೃಷ್ಣ ಸಾರ್ಥಕ್- ಜಗದೀಶ್ ಗೌಡ ಅವರು ನಿರ್ಮಾಣ ಮಾಡಲಿದ್ದಾರೆ ಎಂದು ನಿರ್ದೇಶಕ ಜಡೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

duniya vijay 1 1ಇನ್ನೂ ದುನಿಯಾ ವಿಜಯ್‌ಗೆ ನಾಯಕಿಯಾಗಿ ಕನ್ನಡದ ನಟಿಯೇ ಬರುವ ಸಾಧ್ಯತೆಯಿದೆ. ನಾಯಕಿ ಸೆಲೆಕ್ಷನ್ ಬಗ್ಗೆ ಇನ್ನೂ ಅಂತಿಮ ಆಗಿಲ್ಲ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ರಾಜಹಂಸ, ಜೆಂಟಲ್‌ಮೆನ್, ಗುರು ಶಿಷ್ಯರು ಖ್ಯಾತಿಯ ನಿರ್ದೇಶಕ ಜಡೇಶ್ ಕುಮಾರ್ ಮತ್ತು ದುನಿಯಾ ವಿಜಯ್ ಅವರ ಕಾಂಬಿನೇಷನ್ ಸಿನಿಮಾ ಮುಂದಿನ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

Share This Article
Leave a Comment

Leave a Reply

Your email address will not be published. Required fields are marked *