ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಅವರು ಇದೀಗ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಿನಿಮಾ (Film) ಮತ್ತು ರಾಜಕೀಯ (Politics) ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದ ಚೆಲುವೆ ಪೂಜಾ ಅವರ ಕನ್ನಡ ಪ್ರೀತಿಗೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ನಟಿಯ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ
`ಮುಂಗಾರುಮಳೆ’ (Mungaru Male) ಚಿತ್ರದ ನಟಿ ಪೂಜಾ ಗಾಂಧಿ (Pooja Gandhi) ಅವರ ಕನ್ನಡದ ಪ್ರೇಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಸಂದಭ೯ದಲ್ಲಿ ಶಿವಮೊಗ್ಗೆಯ ಕನ್ನಡಿಗರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಪೂಜಾ ಗಾಂಧಿ ಅವರು ಕನ್ನಡಿಗರಿಗೆ ಖುಷಿ ನೀಡುವ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಡಾ.ರಾಜ್ (Dr. Rajkumar) ಅವರು ಹಾಡಿದ್ದ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸಾಂಗ್‌ನ್ನ ಪೂಜಾ ಗಾಂಧಿ ಅವರು ಹಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ `ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂದು ಬರಹ ಬರೆದುಕೊಂಡು, “ಬಾರಿಸು ಕನ್ನಡ ಡಿಂಡಿಮವ” ಹಾಡನ್ನು ಪೂಜಾ ಅವರೇ ಬರೆದಿರುವ ಹಾಳೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಾಳಿ ಹುಡುಗಿ ಪೂಜಾ ಅವರು ಕನ್ನಡದಲ್ಲಿ ಬರೆದ ಕವಿತೆ ಕನ್ನಡಿಗರ ಮನಸ್ಸು ಗೆದ್ದಿದೆ.
ಕನ್ನಡಿಗರೇ ಆಗಿದ್ದರು ಕನ್ನಡದ ನಟಿಮಣಿಯರಿಗೆ ಕನ್ನಡದ ಬಗ್ಗೆ ಒಲವು ಕಮ್ಮಿಯಾಗಿರುವ ಈ ಸಮಯದಲ್ಲಿ ಬೆಂಗಾಳಿ ನಟಿ ಪೂಜಾ ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡ ಬರವಣಿಗೆ ಜೊತೆಗೆ ಕನ್ನಡ ಕಲಿತು ಸಾಗುತ್ತಿರೋದನ್ನ ನೋಡಿ ನಟಿಯ ಪ್ರಯತ್ನಕ್ಕೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.