ಬೆಂಗಳೂರು: ಪ್ರಯಾಣಿಕರ ಬಹುದಿನದ ಕನಸಾಗಿದ್ದ ಕೆಆರ್‌ಪುರಂ (KRPuram) ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ (Metro) ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಕೊನೆಯ ಹಂತದ ಪ್ರಾಯೋಗಿಕ ಹಂತದ ಸಂಚಾರ ನಡೆಯಲಿದೆ.
12.75 ಕಿ.ಮೀ ಉದ್ದದ ಕೆಆರ್‌ಪುರಂ ಹಾಗೂ ವೈಟ್‍ಫೀಲ್ಡ್ (Whitefield) ಮಾರ್ಗದ ಬಿಎಂಆರ್‌ಸಿಎಲ್ (BMRCL) ಬಹುತೇಕ ಕಾರ್ಯಗಳು ಮುಕ್ತಾಯಗೊಂಡಿವೆ. ಮುಂದಿನ ಒಂದು ತಿಂಗಳೊಳಗಾಗಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಇದರಿಂದ ಈ ಭಾಗದ ಪ್ರಯಾಣಿಕರ ಬಹುದಿನದ ಕನಸು ಈಡೇರಲಿದೆ.
ಇಂದಿನಿಂದ ಪ್ರಾಯೋಗಿಕವಾಗಿ 90 ಕಿ.ಮೀ ವೇಗದಲ್ಲಿ ಐದು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಈ ಪ್ರಾಯೋಗಿಕ ಸಂಚಾರದಲ್ಲಿ ರೈಲ್ವೇ ಸೇಫ್ಟಿ ಕಮಿಷನರ್ (Safety Comissioner) ಕೂಡ ಹಾಜರಿದ್ದು, ತಪಾಸಣೆ ನಡೆಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಪ್ರಾಯೋಗಿಕ ಸಂಚಾರದ ಪ್ರತಿಯೊಂದು ಅಂಶವನ್ನು ಸೇಫ್ಟಿ ಕಮಿಷನರ್ ತಪಾಸಣೆ ನಡೆಸಿ, ವಾರದ ಬಳಿಕ 300 ಪುಟಗಳ ವರದಿಯನ್ನು ಸಲ್ಲಿಸಲಿದ್ದಾರೆ. ಯಾವುದೇ ಲೋಪವಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾದರೆ ಮಾರ್ಚ್ 15ರ ಒಳಗಾಗಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ: ಅಶ್ವಥ್ ನಾರಾಯಣ್
ನೂತನ ಮಾರ್ಗದ ಸಂಚಾರ ಆರಂಭಗೊಳ್ಳುವ ಜೊತೆಗೆ ಮೆಟ್ರೋ ರೈಲುಗಳು ಕೊರತೆ ಎದುರಾಗಿದೆ. ಬಿಎಂಆರ್‌ಸಿಎಲ್‌ನಲ್ಲಿ ಸದ್ಯ 50 ಟ್ರೈನ್‍ಗಳಿದ್ದು, 45 ಕಿ.ಮೀ ಸಂಚರಿಸುತ್ತಿವೆ. ಆದರೆ ನೂತನ ಮಾರ್ಗದ ಆರಂಭದಿಂದ 70 ಕಿ.ಮೀ ವರೆಗೆ ಮೆಟ್ರೋ ಮಾರ್ಗ ವಿಸ್ತರಣೆಗೊಳ್ಳಲಿದೆ. ಇದರಿಂದಾಗಿ ರೈಲುಗಳ ಕೊರತೆಯಾಗುವ ಸಾಧ್ಯತೆಯಿದೆ.
5.5 ನಿಮಿಷಕ್ಕೆ ಒಂದು ಟ್ರೈನ್ ನೇರಳೆ ಮಾರ್ಗದಲ್ಲಿ ಹಾಗೂ ಹಸಿರು ಮಾರ್ಗದಲ್ಲಿ 5 ನಿಮಿಷಕ್ಕೆ ಒಂದು ಟ್ರೈನ್ ಓಡುತ್ತಿದೆ. ಹೀಗಾಗಿ ಟ್ರೈನ್‍ಗಳ ಸಮಯದಲ್ಲಿ ತಡವಾಗುವ ಸಾಧ್ಯತೆಯಿದೆ. ಚೀನಾದ ಸಿಆರ್‌ಆರ್‌ಸಿ ಕಂಪನಿ 216 ಕೋಚ್‍ಗಳನ್ನು ನೀಡುವುದು ಬಾಕಿಯಿದ್ದು ಟ್ರೈನ್‍ಗಳ ಕೊರತೆ ಎದುರಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಣವಿಲ್ಲದೇ ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k