ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget 2023) ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ರಾಮನಗರದ (Ramanagara) ರಾಮದೇವರ ಬೆಟ್ಟದಲ್ಲಿ ಒಂದು ಭವ್ಯವಾದ ರಾಮಮಂದಿರವನ್ನು (Ram Mandir) ನಿರ್ಮಿಸಲಾಗುವುದು ಎಂದು ಘೋಷಿಸಿದರು.
ಈ ಹಿಂದೆ ಸಚಿವ ಅಶ್ವಥ್ ನಾರಾಯಣ (Ashwath Narayan) ಅವರು, ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದ್ದರು. ಅದರಂತೆ ಬಜೆಟ್‌ನಲ್ಲಿ, ರಾಮಮಂದಿರ ನಿರ್ಮಾಣ ಕುರಿತು ಪ್ರಸ್ತಾಪಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಕೊಡುಗೆ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಘೋಷಣೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ರಾಮಮಂದಿರವಾದರೂ ಕಟ್ಟು, ಸೀತಾ ಮಂದಿರವಾದರೂ ಕಟ್ಟು. ಅಶ್ವಥ್ ನಾರಾಯಣ ಮಂದಿರವಾದರೂ ಕಟ್ಟು, ಅಶೋಕ ಮಂದಿರವಾದರೂ ಕಟ್ಟು, ಬಸವರಾಜ ಮಂದಿರವಾದರೂ ಕಟ್ಟು. ಯಡಿಯೂರಪ್ಪ ಮಂದಿರವಾದರೂ ಕಟ್ಟು, ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಮೊದಲು ರಾಮನಗರದಲ್ಲಿ ಬಿಜೆಪಿ ಆಫೀಸ್ ಕಟ್ಟಲಿ ಎಂದು ತಿರುಗೇಟು ನೀಡಿದರು.
ನನಗೆ ನನ್ನ ಕಚೇರಿಯೇ ದೇವಸ್ಥಾನ. ಏನೋ ಕ್ಲೀನ್ ಮಾಡಿಸ್ತೀನಿ ಅಂತಾ ಹೇಳಿದ.. ಏನಪ್ಪ ಮಾಡಿದ? ಅಲ್ಲಿಗೆ ಬಂದು ವೃಷಭಾವತಿ ನೀರು ಕುಡಿಯಲಿ ಮೊದಲು. ಕೊಚ್ಚೆ ನೀರನ್ನು ಕ್ಲೀನ್ ಮಾಡಿಸಿದ್ದಾನಾ? ಭ್ರಷ್ಟಾಚಾರ ನಿಲ್ಲಿಸಿದ್ದಾನಾ? ನಾನಿನ್ನೂ ಸ್ಕಿಲ್ ಡೆವಲಪ್ಮೆಂಟ್ ಹಗರಣ ಬಿಚ್ಚಿಟ್ಟಿಲ್ಲ. ಇನ್ನೂ ಕೆಲ ದಿನಗಳಲ್ಲಿ ಅದನ್ನೂ ಬಿಚ್ಚಿಡ್ತೀನಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ರಾಜ್ಯ ಬಜೆಟ್: ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k