ಬಾಲಿವುಡ್ನಲ್ಲಿ (Bollywood) ಈಗ ಮದುವೆ ವಾದ್ಯದ ಸೌಂಡ್ ಜೋರಾಗಿದೆ. ಇತ್ತೀಚಿಗೆ ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Rahul) ಮದುವೆಯಾಗಿದ್ದರು. ಈಗ ಕಿಯಾರಾ- ಸಿದ್ಧಾರ್ಥ್ ಮದುವೆ ಸುದ್ದಿ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ಏಂಗೇಜ್ ಆಗುವ ಸುದ್ದಿಯೊಂದು ಹರಿದಾಡುತ್ತಿದೆ. ನಟ ಪ್ರಭಾಸ್ (Actor Prabhas) ಮತ್ತು ಕೃತಿ ಸನೋನ್ (Kriti Sanon) ನಿಶ್ಚಿತಾರ್ಥದ (Engagement) ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.

ಸಿನಿಮಾ ವಿಮರ್ಶಕ ಉಮೈರ್ ಸಂಧು `ಆದಿಪುರುಷ್’ ಜೋಡಿ ಬಗ್ಗೆ ಟ್ವೀಟ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಈಗ ಸಂಚಲನ ಸೃಷ್ಟಿಸಿದೆ. ಪ್ರಭಾಸ್ ಮತ್ತು ಕೃತಿ ಮುಂದಿನ ವಾರ ಮಾಲ್ಡೀವ್ಸ್ನಲ್ಲಿ (Maldives) ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
BREAKING NEWS: #KritiSanon & #Prabhas will get engaged next week in Maldives ????????!! So Happy for them.
— Umair Sandhu (@UmairSandu) February 5, 2023
ಈ ನಿಶ್ಚಿತಾರ್ಥದ ಸುದ್ದಿ ಬಗ್ಗೆ ಸ್ವತಃ ಪ್ರಭಾಸ್-ಕೃತಿಗೆ ತಿಳಿದಿಲ್ಲ ಎಂದು ನೆಟ್ಟಿಗರು ಉಮೈರ್ ಸಂಧು ಅವರ ಕಾಲೆಳೆದಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದುನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

