ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

Public TV
2 Min Read
NARENDRA MODI 3

ನವದೆಹಲಿ: ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ಈ ಬಾರಿಯ ಬಜೆಟ್ ಅಧಿವೇಶನಕ್ಕೂ (Parliament) ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ (ಬುಧವಾರ) ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವರು ಮಹಿಳೆಯಾಗಿದ್ದು, ಭಾರತ ಮಾತ್ರವಲ್ಲ, ಇಡೀ ವಿಶ್ವವೇ ನಮ್ಮ ಬಜೆಟ್ ಮೇಲೆ ಕಣ್ಣಿಟ್ಟಿದೆ. ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂದು ಖಾತ್ರಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

droupadi Murmu 1

ಸಂಸತ್ತಿನಲ್ಲಿ ಮೊದಲ ಬಾರಿಗೆ ಹೊಸ ಸಂಸದರು ಮಾತನಾಡುವಾಗ ಇಡೀ ಸಂಸತ್ತು ಅವರಿಗೆ ಗೌರವವನ್ನು ನೀಡಿ ವಿಶ್ವಾಸವನ್ನು ನೀಡುವ ವಾತಾವರಣವನ್ನು ಸೃಷ್ಟಿಸುವುದು ಸಂಸತ್ತಿನಲ್ಲಿ ಸಂಪ್ರದಾಯವಾಗಿದೆ. ಅದೇ ರೀತಿ ಇಂದಿನ ಭಾಷಣವು ರಾಷ್ಟ್ರಪತಿಯವರ ಮೊದಲ ಭಾಷಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ ಎಂದು ಅಭಿಪ್ರಾಯ ಪಟ್ಟರು.

ದೇಶ ಮೊದಲು ಎನ್ನುವುದೇ ನಮ್ಮೆಲ್ಲರ ಇರುವುದು ಉದ್ದೇಶವಾಗಿದೆ. ಸದನದಲ್ಲಿ ಪ್ರತಿ ವಿಷಯದ ಬಗ್ಗೆಯೂ ಉತ್ತಮವಾಗಿ ಚರ್ಚೆ ಮಾಡುತ್ತೇವೆ. ಎಲ್ಲ ಸಂಸದರು ಈ ಅಧಿವೇಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸುತ್ತಾರೆ. ಈ ಅಧಿವೇಶನವು ನಮಗೆಲ್ಲರಿಗೂ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಸಮಾಜವನ್ನು ಅಶ್ಲೀಲ ಎನ್ನುವರು ಹಿಂದೂಗಳ ಮತ ಬೇಡವೆಂದು ಹೇಳಲಿ: ಕಟೀಲ್

parliament building

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಬಜೆಟ್‌ ಅನ್ನು ಮಂಡಿಸಲಿದ್ದು, ಈ ವರ್ಷ, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಭಾರತದ ವಾರ್ಷಿಕ ಪೂರ್ವ-ಬಜೆಟ್ ಆರ್ಥಿಕ ಸಮೀಕ್ಷೆಯು 2023-24ರಲ್ಲಿ GDP ಬೆಳವಣಿಗೆಯನ್ನು 6-6.8% ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಮೂಲವನ್ನು ಉಲ್ಲೇಖಿಸಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‍ಗೆ ಜೀವ ಬೆದರಿಕೆ- ವ್ಯಕ್ತಿ ಅರೆಸ್ಟ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *