`ಧಮಾಕ’ ಸಕ್ಸಸ್ ನಂತರ ಕನ್ನಡತಿ ಶ್ರೀಲೀಲಾಗೆ ತೆಲುಗಿನಲ್ಲಿ ಡಿಮ್ಯಾಂಡ್

Public TV
1 Min Read
sreeleela

ಕಿಸ್, ಭರಾಟೆ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ (Sandalwood) ಮೋಡಿ ಮಾಡಿದ್ದ ನಟಿ ಶ್ರೀಲೀಲಾ (Sreeleela) ಈಗ ‌ಕನ್ನಡದ ಜೊತೆ ತೆಲುಗಿನಲ್ಲಿ (Telagu Films) ಮಿಂಚ್ತಿದ್ದಾರೆ. ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳು ನಟಿಗೆ ಅರಸಿ ಬರುತ್ತಿದೆ.

sreeleela 2

ರಶ್ಮಿಕಾ ಮಂದಣ್ಣ‌ (Rashmika Mandanna), ಪೂಜಾ ಹೆಗ್ಡೆ (Pooja Hegde) ನಂತರ ಕನ್ನಡದ ನಟಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ. ಕಿಸ್, ಭರಾಟೆ, ಬೈ ಟು ಲವ್ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ಬ್ಯೂಟಿ `ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು.

sreeleela

ಇತ್ತೀಚಿನ `ಧಮಾಕ’ (Dhamaka Film) ಸಿನಿಮಾ ಮೂಲಕ ರವಿತೇಜಾಗೆ (Raviteja) ನಾಯಕಿಯಾಗಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ 100 ಕೋಟಿ ರೂ. ಕಲೆಕ್ಷನ್ ಕೂಡ ಮಾಡಿ ಗೆದ್ದಿದೆ. ಹೀಗಿರುವಾಗ ʻಕಿಸ್ʼ ನಟಿಗೆ ಭಾರಿ ಬೇಡಿಕೆ ಶುರುವಾಗಿದೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

 

View this post on Instagram

 

A post shared by Sreeleela (@sreeleela14)

ಮಹೇಶ್ ಬಾಬು ನಟನೆಯ 28ನೇ ಚಿತ್ರ, ಅನಗನಗ ಒಕ ರಾಜು, ಜ್ಯೂನಿಯರ್, ನಿರ್ದೇಶಕ ಬೊಯಾಪತಿ ಶ್ರೀನು ಜೊತೆಗಿನ ಚಿತ್ರಗಳು ನಟಿಯ ಕೈಯಲ್ಲಿದೆ. ಇನ್ನೂ ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.

sreeleela

ರಶ್ಮಿಕಾ ನಂತರ ಶ್ರೀಲೀಲಾ ಬೇಡಿಕೆ ದೊಡ್ಡ ಮಟ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ `ಪುಷ್ಪ’ ನಟಿಗೆ ಸೆಡ್ಡು ಹೊಡೆದರು ಅಚ್ಚರಿಪಡಬೇಕಿಲ್ಲ ಎನ್ನುತ್ತಿದ್ದಾರೆ ಸಿನಿಪಂಡಿತರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *