ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..

Public TV
3 Min Read
mother in law

ಸಂಸಾರದಲ್ಲಿ ಅತ್ತೆ-ಸೊಸೆ ಅಂದ್ರೆ ಥಟ್ಟನೆ ನೆನಪಾಗೋದು ಹಾವು-ಮುಂಗುಸಿ. ಬಹುಪಾಲು ಮನೆಗಳಲ್ಲಿ ಅತ್ತೆ-ಸೊಸೆ ಸದಾ ಜಗಳ ಇದ್ದೇ ಇರುತ್ತೆ. ಒಬ್ಬರಿಗೆ ಒಬ್ಬರನ್ನು ಕಂಡ್ರೆ ಹಾಗಲ್ಲ. ಒಬ್ಬರ ಕೆಲಸ, ಕಾರ್ಯಗಳು ಇನ್ನೊಬ್ಬರಿಗೆ ಆಗಲ್ಲ. ಪರಸ್ಪರರಲ್ಲಿ ತಪ್ಪು ಹುಡುಕುವುದು, ಕೊಂಕು ಮಾತು… ಹೀಗೆ ಒಂದಲ್ಲಾ ಒಂದು ರಗಳೆ. ಥೇಟ್‌ ಈಗಿನ ಧಾರಾವಾಹಿಗಳ ಥರಾನೆ ಅಂದುಕೊಳ್ಳಿ.

ಆದ್ರೆ ಎಲ್ಲಾ ಮನೆಗಳಲ್ಲೂ ಅತ್ತೆ-ಸೊಸೆ ಜಗಳ ಇರುತ್ತೆ ಅಂದುಕೊಳ್ಳೋದು ತಪ್ಪು. ಎಷ್ಟೋ ಕಡೆ ಮಾದರಿ ಅತ್ತೆ-ಸೊಸೆಯರಿರುತ್ತಾರೆ. ಅವರನ್ನು ನೋಡಿದ್ರೆ ಸಾಕು, ಅತ್ತೆ-ಸೊಸೆ ಅಂದ್ರೆ ಹೀಗಿರಬೇಕು ಎಂದುಕೊಳ್ಳುವಷ್ಟು ಅನ್ಯೋನ್ಯವಾಗಿರುತ್ತಾರೆ. ಈಗಿನ ಕಾಲದ ಎಷ್ಟೋ ಸೊಸೆಯಂದಿರಿಗೆ ತಮ್ಮ ಅತ್ತೆ (Mother In Law) ನಡತೆ, ಗುಣಗಳನ್ನು ಅರಿತುಕೊಳ್ಳವುದಕ್ಕೂ ಕಷ್ಟ ಪಡ್ತಾರೆ. ಅತ್ತೆಯನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟ ಅಂತಾರೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

mother in law2

ಒಳ್ಳೆ ಮನಸ್ಸಿನ ಅತ್ತೆಯಂದಿರು ತನ್ನ ಸೊಸೆ ಜೊತೆ ಸ್ನೇಹಿತೆಯಂತೆ ಇರಲು ಇಷ್ಟ ಪಡ್ತಾರೆ. ಸೊಸೆ (Daughter In Law) ಜೊತೆ ಅವರ ನಡವಳಿಕೆಗಳೇ ಅದನ್ನು ಸೂಚಿಸುತ್ತದೆ. ನಿಮ್ಮ ಅತ್ತೆಗೆ ಈ ಗುಣಗಳಿದ್ರೆ, ಖಂಡಿತವಾಗಿಯೂ ಅವರು ನಿಮ್ಮೊಟ್ಟಿಗೆ ಸ್ನೇಹದಿಂದಿರಲು ಪ್ರಯತ್ನಿಸುತ್ತಿದ್ದಾರೆ ಅಂತಾ ಅರ್ಥ. ಅತ್ತೆಯ ಅಂತಹ ಗುಣಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಸೊಸೆಯರಿಗೆ ಇಲ್ಲಿದೆ ನೋಡಿ ಮಾಹಿತಿ.

ನಿಮ್ಮ ಅಭಿಪ್ರಾಯಗಳನ್ನ ಗೌರವಿಸುತ್ತಾರೆ
ಎಷ್ಟೋ ಮಂದಿ ಅತ್ತೆಯಂದಿರು, ನೀವು (ಸೊಸೆ) ಏನೋ ಯೋಚಿಸುತ್ತಿದ್ದೀರಿ, ಏನನ್ನೋ ಹೇಳಲು ಬಯಸುತ್ತಿದ್ದೀರಿ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆಗ ಅವರು ನಿಮ್ಮ ಅಭಿಪ್ರಾಯಗಳಿಗೆ ಅಡ್ಡಿ ಪಡಿಸುವುದಿಲ್ಲ. ನಿಮ್ಮ ಭಿನ್ನಾಭಿಪ್ರಾಯಗಳನ್ನೂ ಅವರು ಗೌರವಿಸುತ್ತಾರೆ. ಈ ಗುಣವಿರುವ ಅತ್ತೆಯಂದಿರು ಸೊಸೆಯರೊಟ್ಟಿಗೆ ಸ್ನೇಹ ಬಾಂಧವ್ಯದಿಂದ ಇರುತ್ತಾರೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

mother in law1

ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ
ಅತ್ತೆ ನಿಮ್ಮ ಜೀವನ, ಕೆಲಸ, ಆಸಕ್ತಿಗಳು, ಹವ್ಯಾಸಗಳು ಮತ್ತು ವೃತ್ತಿಜೀವನದ ಬಗ್ಗೆ ವಿಚಾರಿಸುತ್ತಿದ್ದರೆ, ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಸಂಕೇತ. ನಿಮ್ಮ ಬೇಕು ಬೇಡಗಳನ್ನೂ ಆಲಿಸುತ್ತಾರೆ. ಈ ಗುಣ ಇಬ್ಬರ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ.

ತನಗೆ ಹೋಲಿಕೆ ಮಾಡಿಕೊಳ್ಳಲ್ಲ
ಎಷ್ಟೋ ಅತ್ತೆಯಂದಿರು ತನಗೆ ಹೋಲಿಸಿಕೊಂಡು ಸೊಸೆಯಂದಿರನ್ನು ಹೀಯಾಳಿಸುವುದೇ ಹೆಚ್ಚು. “ನಮ್ಮ ಕಾಲದಲ್ಲಿ ಹಾಗಿದ್ದೆ, ಹೀಗಿದ್ದೆ” ಅಂತಾ ಹೇಳುತ್ತಿರುತ್ತಾರೆ. ಆದರೆ ಪ್ರಬುದ್ಧ ಮನಸ್ಸಿನ ಅತ್ತೆಯಂದಿರು ತನಗೆ ಎಂದಿಗೂ ಸೊಸೆಯನ್ನು ಹೋಲಿಕೆ ಮಾಡಿಕೊಳ್ಳಲ್ಲ. ನಿಮ್ಮ ಕೆಲಸ, ಕಾರ್ಯಗಳನ್ನು ಗೌರವಿಸುತ್ತಾರೆ. ಸೊಸೆಯ ಅಭಿಪ್ರಾಯವನ್ನೂ ಗೌರವಿಸುತ್ತಾರೆ.

mother in law3

ನೀವು ಎದುರಿಗೆ ಇಲ್ಲದಿದ್ರೂ ಗೌರವಿಸ್ತಾರೆ
ಕೆಲವರು ಸೊಸೆ ಎದುರಿಗಿದ್ದಾಗ ಹೊಗಳುವುದು, ಅವರ ಇಲ್ಲದಿದ್ದಾಗ ತೆಗಳುವ ಕೆಲಸ ಮಾಡ್ತಾರೆ. ನಿಮ್ಮ (ಸೊಸೆ) ಜೊತೆ ಇದ್ದಾಗ ಪ್ರೀತಿಯಿಂದ ಮಾತನಾಡಿ, ನೀವು ಹೊರಗೆ ಹೋಗಿದ್ರೆ ನಿಮ್ಮ ಇಲ್ಲಸಲ್ಲದ ಆರೋಪ ಮಾಡ್ತಾರೆ. ಆದರೆ ಒಳ್ಳೆ ಮನಸ್ಸಿನ ಅತ್ತೆಯರು, ನೀವು ಹೊರಗಿದ್ದಾಗಲೂ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುತ್ತಾರೆ. ನಿಮ್ಮನ್ನು ಸದಾ ಗೌರವಿಸುತ್ತಾರೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

ನಿಮ್ಮ ಮಿತಿಗಳನ್ನ ಅರ್ಥ ಮಾಡಿಕೊಳ್ತಾರೆ
ನಿಮ್ಮೊಟ್ಟಿಗೆ ಉತ್ತಮ ಬಾಂಧವ್ಯ ಬಯಸುವ ಅತ್ತೆಯರು, ಯಾವುದೇ ರೀತಿಯಲ್ಲೂ ನಿಮ್ಮ ಕೆಲಸಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಮನೆಯಲ್ಲಿ ನಿಮ್ಮ ಜವಾಬ್ದಾರಿ, ವ್ಯವಹರಿಸುವ ರೀತಿ ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ನಿಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ತಾರೆ. ನಿಮ್ಮ ಯಾವುದೇ ಕೆಲಸಗಳಿಗೆ ಅವರು ಮಧ್ಯೆ ಪ್ರವೇಶ ಮಾಡಲ್ಲ. ಸದಾ ಸೊಸೆಯ ಸ್ನೇಹ, ಪ್ರೀತಿ, ನಂಬಿಕೆ ಗಳಿಸಲು ಪ್ರಯತ್ನಿಸುವ ಅತ್ತೆಯರಿಗೆ ಈ ಮೇಲಿನ ಗುಣಗಳಿರುತ್ತೆ. ಅಂತಹ ಅತ್ತೆಯರ ಮೇಲೆ ಸೊಸೆಯಂದಿರು ಅನುಮಾನ ಪಡಬಾರದು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *