ಸಂಗೀತ ಲೋಕದ ಖ್ಯಾತ ಗಾಯಕಿ ಎಲ್ವಿಸ್ ಪ್ರೆಸ್ಲಿ ಪುತ್ರಿ ಲೀಸಾ (Lisa Marie Presley) ಜನವರಿ 12ರಂದು ನಿಧನರಾಗಿದ್ದಾರೆ. ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ಮೇರಿ ಪ್ರೆಸ್ಲಿ ಹೃದಯಾಘಾತದಿಂದ (Death) ಮೃತಪಟ್ಟಿದ್ದಾರೆ. 54ನೇ ವಯಸ್ಸಿಗೆ ಲೀಸಾ ಇಹಲೋಕ ತ್ಯಜಿಸಿದ್ದಾರೆ.
ಮೈಕಲ್ ಜಾಕ್ಸನ್ ಮಾಜಿ ಪತ್ನಿ ಲೀಸಾ ಅವರು ಲಾಸ್ ಏಂಜಲೀಸ್‌ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಲೀಸಾ ಅವರ ಮರಣ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
1968ರಲ್ಲಿ ಲೀಸಾ ಅವರು ಜನಿಸಿದರು. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ ತಂದೆ ಎಲ್ವಿಸ್ ನಿಧನರಾದರು. 2023ರಲ್ಲಿ ಲೀಸಾ ಸಂಗೀತ ಲೋಕಕ್ಕೆ ಕಾಲಿಟ್ಟರು. ಲೀಸಾ ಅವರು ಹಾಡಿರುವ ಸಾಕಷ್ಟು ಆಲ್ಬಂ ಸೂಪರ್ ಹಿಟ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ
ಇನ್ನೂ ಲೀಸಾ ನಾಲ್ಕು ಬಾರಿ ಮದುವೆ ಆಗಿದ್ದರು. 1988ರಲ್ಲಿ ಡ್ಯಾನಿಯನ್ನು ಮದುವೆ ಆದರು. 1994ರಲ್ಲಿ ಇವರ ವಿಚ್ಛೇದನ ಆಯಿತು. ಅದಾದ ಕೇವಲ 20 ದಿನಕ್ಕೆ ಮೈಕಲ್ ಜಾಕ್ಸನ್ ಅವರನ್ನು ಲೀಸಾ ಮದುವೆ ಆದರು ಇವರು ಎರಡು ವರ್ಷ ಸಂಸಾರ ನಡೆಸಿದರು. ನಿಕೋಲಸ್ ಕೇಜ್ (2002-2004), ಮೈಕಲ್ ಲಾಕ್‌ವುಡ್ (2006-2021) ಜೊತೆ ಲೀಸಾ ಸಂಸಾರ ನಡೆಸಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k