ಟಾಲಿವುಡ್‌ನಲ್ಲಿ (Tollywood) ಸದ್ಯ ಚಾಲ್ತಿಯಲ್ಲಿರುವ ಸುದ್ದಿ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ (Pavitra Lokesh) ಕಿಸ್ಸಿಂಗ್ ವೀಡಿಯೋ ವಿಚಾರ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನನಗೂ ಸಂಗಾತಿ ಬೇಕು ಎಂದು ನಟಿ ಪ್ರಗತಿ ಹೇಳಿದ್ದಾರೆ.
ತೆಲುಗು ಸಿನಿಮಾರಂಗದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಿಸ್ಸಿಂಗ್ ವೀಡಿಯೋ 9Kissing Video) ಭಾರಿ ಸದ್ದು ಮಾಡಿದ ಬೆನ್ನಲ್ಲೇ ನಟಿ ಪ್ರಗತಿ (Actress Pragathi) ತಮ್ಮ ಮಹಾದಾಸೆಯನ್ನ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ಸಂಗತಿ(Partner) ಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?
ತೆಲುಗಿನ ನಟಿ ಪ್ರಗತಿ 46ನೇ ವಯಸ್ಸಿಗೆ ಮರುಮದುವೆಗೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಆಪ್ತ ವಲಯದಲ್ಲಿ ನನಗೂ ಜೋಡಿ ಬೇಕು ಎಂದು ಹೇಳಿರುವ ಮಾತು ಈಗ ಎಲ್ಲಾ ಕಡೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಪ್ರಗತಿ ಅವರ ಹೇಳಿಕೆ ಕೇಳಿ, ಎಲ್ಲಾ ಪವಿತ್ರಾ ಮತ್ತು ನರೇಶ್ ಮಹಿಮೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.
ನಟಿ ಪ್ರಗತಿ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ಇಬ್ಬರು ಡಿವೋರ್ಸ್ ಪಡೆದಿದ್ದರು. ಇದೀಗ ಮತ್ತೆ ಮರುಮದುವೆಗೆ ನಟಿ ಮನಸ್ಸು ಮಾಡಿದ್ದಾರಂತೆ. ಅಷಕ್ಕೂ ಈಗ ಹಬ್ಬಿರುವ ಸುದ್ದಿ ನಿಜಾನಾ, ಸುಳ್ಳಾ ಎಂಬುದನ್ನ ನಟಿಯೇ ಸ್ಪಷ್ಟಪಡಿಸಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k