ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

Public TV
1 Min Read
cinema 1 e1672744536240

ನವದೆಹಲಿ: ಪ್ರೇಕ್ಷಕರು ಹೊರಗಡೆಯಿಂದ ಆಹಾರ ಮತ್ತು ಪಾನೀಯವನ್ನು(Food and Beverage) ಚಲನಚಿತ್ರ ಮಂದಿರಕ್ಕೆ(Cinema Halls) ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರ ಪೀಠವು ಚಿತ್ರಮಂದಿರವು ಮಾಲೀಕರ ಖಾಸಗಿ ಆಸ್ತಿಯಾಗಿದೆ. ಆದರೆ ಶುದ್ಧವಾದ ನೀರನ್ನು ಉಚಿತವಾಗಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

Supreme Court 1

ವೀಕ್ಷಕರು ಮನರಂಜನೆಗಾಗಿ ಸಿನಿಮಾ ಹಾಲ್‌ಗೆ ಭೇಟಿ ನೀಡುತ್ತಾರೆ. ಚಿತ್ರಮಂದಿರದ ಮಾಲೀಕರು ಆಹಾರ ಮತ್ತು ಪಾನೀಯಗಳ ಪ್ರವೇಶವನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿದ್ದಾರೆ. ಲಭ್ಯವಿರುವ ಪಾನಿಯವನ್ನು ಸೇವಿಸಬೇಕೇ? ಬೇಡವೇ ಎಂಬುದು ಸಂಪೂರ್ಣವಾಗಿ ಚಲನಚಿತ್ರ ಪ್ರೇಕ್ಷಕರ ಆಯ್ಕೆಯ ಮೇಲೆ ಇರುತ್ತದೆ ಎಂದು ಪೀಠ ಹೇಳಿದೆ.

ವೀಕ್ಷಕರು ಚಲನಚಿತ್ರ ಮಂದಿರಕ್ಕೆ ಪ್ರವೇಶಿಸಿದರೆ, ಅವನು/ಅವಳು ಚಿತ್ರಮಂದಿರದ ಮಾಲೀಕರ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಇದು ಸ್ಪಷ್ಟವಾಗಿ ಥಿಯೇಟರ್ ಮಾಲೀಕರ ವಾಣಿಜ್ಯ ನಿರ್ಧಾರದ ವಿಷಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.  ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ

ಪ್ರೇಕ್ಷಕರು ತಮ್ಮ ಸ್ವಂತ ಆಹಾರ ಮತ್ತು ಪಾನೀಯಗಳನ್ನು ಚಿತ್ರಮಂದಿರಗಳಿಗೆ ಕೊಂಡೊಯ್ಯುವುದನ್ನು ಮಲ್ಟಿಪ್ಲೆಕ್ಸ್‌ಗಳು ತಡೆಯಬಾರದು ಎಂದು ಜಮ್ಮು ಕಾಶ್ಮೀರ ಹೈಕೋರ್ಟ್‌ 2018ರಲ್ಲಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಥಿಯೇಟರ್‌, ಮಲ್ಟಿಪ್ಲೆಕ್ಸ್‌(Multiplexes) ಮಾಲೀಕರು ಮೇಲ್ಮನವಿ ಸಲ್ಲಿಸಿದ್ದರು.

ಹಾಲ್‌ ನೀಡುವ ಸಿನಿಮಾ ಟಿಕೆಟ್‌ ಜೊತೆ ಮಾತ್ರ ಪ್ರೇಕ್ಷಕರ ಒಪ್ಪಂದ ಇರುತ್ತದೆ. ಆದರೆ ಸಭಾಂಗಣದೊಳಗೆ ತಿನ್ನುವ ವಸ್ತುಗಳನ್ನು ಕೊಂಡೊಯ್ಯಲು ಪ್ರೇಕ್ಷಕರಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಚಿತ್ರಮಂದಿರಗಳ ಆವರಣವು ಸಾರ್ವಜನಿಕ ಆಸ್ತಿಯಲ್ಲ. ಅಷ್ಟೇ ಅಲ್ಲದೇ ಥಿಯೇಟರ್‌ ಒಳಗಡೆ ಆಹಾರವನ್ನು ಖರೀದಿಸಲೇಬೇಕೆಂದು ಪ್ರೇಕ್ಷಕರಿಗೆ ನಾವು ಒತ್ತಾಯ ಮಾಡುತ್ತಿಲ್ಲ ಎಂದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ವಾದ ಮಂಡಿಸಿ ಮಲ್ಟಿಪ್ಲೆಕ್ಸ್‌ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *