ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದರಂತೆ. ಶ್ರದ್ಧಾಳನ್ನು ಅವನ ಪ್ರಿಯಕರ 25 ಫೀಸ್ ಮಾಡಿದ್ದ ವಿಷಯ ಶಿಜಾನ್ ನಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು ಎಂದು ಹೇಳಲಾಗಿದೆ.
ತುನಿಷಾ ಶರ್ಮಾ ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದೆ. ಸಾಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಹೇಳಲಾಗಿತ್ತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ
ನಿನ್ನೆಯಷ್ಟೇ ತುನಿಷಾ ಅವರ ಬಾಯ್ ಫ್ರೆಂಡ್ ಶಿಜಾನ್ ಪೊಲೀಸರ ಎದುರು ಆಘಾತಕಾರಿ ಹೇಳಿಕೆಯನ್ನು ನೀಡಿದ್ದ. ತುನಿಷಾ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿಕೊಂಡಿದ್ದಾನೆ. ನಮ್ಮಿಬ್ಬರ ಮಧ್ಯ ಸಣ್ಣಪುಟ್ಟ ಗಲಾಟೆ ನಡೆಯುತ್ತಲೇ ಇತ್ತು. ಧರ್ಮದ ಕಾರಣಕ್ಕಾಗಿಯೂ ಜಗಳ ನಡೆದಿತ್ತು. ಇದರಿಂದ ಬೇಸತ್ತ ಅವರು ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು ಅವರನ್ನು ಬದುಕಿಸಿದೆ ಎಂದು ಹೇಳಿದ್ದಾನೆ ಎನ್ನಲಾಗುತ್ತಿದೆ.
ತುನಿಷಾ ಶರ್ಮಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಿದ್ದವು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬೇರೆ ಏನೋ ಇದೆ ಎಂದು ತುನಿಷಾ ತಾಯಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ಇನ್ನೂ ಕೆಲವರು ಇದೊಂದು ಲವ್ ಜಿಹಾದ್. ಹಾಗಾಗಿಯೇ ಸತ್ತಿದ್ದಾಳೆ ಎಂದೂ ಹೇಳಲಾಗಿತ್ತು. ತುನಿಷಾ ಆತ್ಮೀಯರು ಆಕೆ ಗರ್ಭಿಣಿಯಾಗಿದ್ದಳು ಎಂದು ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನಗಳಿಗೂ ಉತ್ತರ ಸಿಕ್ಕಿದೆ.
ನಟಿಯ ಮರಣೋತ್ತರ ವರದಿ ಸಿಕ್ಕಿದ್ದು, ತುನಿಷಾ ಅವರದ್ದು ಆತ್ಮಹತ್ಯೆ ಎಂದು ಬಹಿರಂಗವಾಗಿದೆ. ಅಲ್ಲದೇ, ಅವರು ಗರ್ಭಿಣಿ ಎಂದು ಹೇಳಲಾಗಿತ್ತು. ಅದು ಕೂಡ ಸುಳ್ಳು ಎನ್ನುವ ವರದಿ ಬಂದಿದೆ. ಮೈಮೇಲೆ ಯಾವುದೇ ತರಹದ ಗುರುತುಗಳು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ತುನಿಷಾ ಸಾವು ಆತ್ಮಹತ್ಯೆಯಿಂದ ಆಗಿದ್ದು ಎಂದು ದೃಢಪಡಿಸಿದ್ದಾರೆ.