ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಬಾಯ್ ಫ್ರೆಂಡ್ ಶಿಜಾನ್ ಪೊಲೀಸರ ಎದುರು ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾನೆ. ತುನಿಷಾ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ಮಧ್ಯ ಸಣ್ಣಪುಟ್ಟ ಗಲಾಟೆ ನಡೆಯುತ್ತಲೇ ಇತ್ತು. ಧರ್ಮದ ಕಾರಣಕ್ಕಾಗಿಯೂ ಜಗಳ ನಡೆದಿತ್ತು. ಇದರಿಂದ ಬೇಸತ್ತ ಅವರು ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು ಅವರನ್ನು ಬದುಕಿಸಿದೆ ಎಂದು ಹೇಳಿದ್ದಾನೆ ಎನ್ನಲಾಗುತ್ತಿದೆ.
ತುನಿಷಾ ಶರ್ಮಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಿದ್ದವು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬೇರೆ ಏನೋ ಇದೆ ಎಂದು ತುನಿಷಾ ತಾಯಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ಇನ್ನೂ ಕೆಲವರು ಇದೊಂದು ಲವ್ ಜಿಹಾದ್. ಹಾಗಾಗಿಯೇ ಸತ್ತಿದ್ದಾಳೆ ಎಂದೂ ಹೇಳಲಾಗಿತ್ತು. ತುನಿಷಾ ಆತ್ಮೀಯರು ಆಕೆ ಗರ್ಭಿಣಿಯಾಗಿದ್ದಳು ಎಂದು ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನಗಳಿಗೂ ಉತ್ತರ ಸಿಕ್ಕಿದೆ.
ನಟಿಯ ಮರಣೋತ್ತರ ವರದಿ ಸಿಕ್ಕಿದ್ದು, ತುನಿಷಾ ಅವರದ್ದು ಆತ್ಮಹತ್ಯೆ ಎಂದು ಬಹಿರಂಗವಾಗಿದೆ. ಅಲ್ಲದೇ, ಅವರು ಗರ್ಭಿಣಿ ಎಂದು ಹೇಳಲಾಗಿತ್ತು. ಅದು ಕೂಡ ಸುಳ್ಳು ಎನ್ನುವ ವರದಿ ಬಂದಿದೆ. ಮೈಮೇಲೆ ಯಾವುದೇ ತರಹದ ಗುರುತುಗಳು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ತುನಿಷಾ ಸಾವು ಆತ್ಮಹತ್ಯೆಯಿಂದ ಆಗಿದ್ದು ಎಂದು ದೃಢಪಡಿಸಿದ್ದಾರೆ.
ಈ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಕಾರಣ ಎಂದು ಆರೋಪಿಸಲಾಗಿದೆ. ಸಿಕ್ಕಿರುವ ಡೆತ್ ನೋಟ್ ನಲ್ಲಿ ಶಿಜಾನ್ ಹೆಸರನ್ನು ಆಕೆ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಜಾನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಈ ಆತ್ಮಹತ್ಯೆ ಪ್ರಕರಣಕ್ಕೆ ಲವ್ ಜಿಹಾದ್ ಕಳಂಕ ಅಂಟಿಕೊಂಡಿದೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಈ ಕುರಿತು ಮಾತನಾಡಿದ್ದು, ಮೃತ ತುನಿಷಾ ಮತ್ತು ಶಿಜಾನ್ ನಡುವೆ ಪ್ರೇಮವಿತ್ತು. ಪರಸ್ಪರ ಗಲಾಟೆ ಮಾಡಿಕೊಂಡು ಅವರು ದೂರವಾಗಿದ್ದರು. ಆ ನೋವಿನಲ್ಲೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಲವ್ ಜಿಹಾದ್ ಅನಿಸುತ್ತಿದೆ. ಕೂಡಲೇ ಈ ದಿಕ್ಕಿನಲ್ಲಿ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಲಿ ಬಾಬಾ ದಸ್ತಾನ್ ಇ –ಕಾಬೂಲ್’ ಶೋನಲ್ಲಿ ತುನಿಷಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಶೋ ಶೂಟಿಂಗ್ ಗಾಗಿ ಹೋದವರು ಶವವಾಗಿ ಮನೆಗೆ ಬಂದಿದ್ದಾರೆ. ಕೇವಲ 15 ದಿನಗಳ ಹಿಂದೆಯಷ್ಟೇ ಅವರಿಗೆ ಲವ್ ಬ್ರೇಕ್ ಅಪ್ ಆಗಿತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.