#WTC2023 ಫೈನಲ್ ರೇಸ್‍ನಲ್ಲಿ ಭಾರತ – ಆಸೀಸ್ ಸರಣಿ ನಿರ್ಣಾಯಕ

Public TV
2 Min Read
TEAM INDIA 6

ಮುಂಬೈ: ಬಾಂಗ್ಲಾದೇಶ (Bangladesh) ವಿರುದ್ಧ ಟೀಂ ಇಂಡಿಯಾ (India) 2-0 ಅಂತರದಲ್ಲಿ ಟೆಸ್ಟ್ (Test) ಸರಣಿ ಗೆದ್ದುಕೊಂಡ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (World Test Championship) ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ಫೈನಲ್ ಆಸೆ ಚಿಗುರಿಕೊಂಡಿದೆ.

TEAM INDIA 1 4

ಭಾರತ, ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದ ಖುಷಿಯೊಂದಿಗೆ ಡಬ್ಲ್ಯೂಟಿಸಿ (WTC) ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿರುವುದು ಟೀಂ ಇಂಡಿಯಾಗೆ ಡಬಲ್ ಸಂತಸ ತಂದಿದೆ. ಆದರೆ ಭಾರತ ಫೈನಲ್ ಖಚಿತ ಪಡಿಸಿಕೊಳ್ಳಬೇಕಾದರೆ ಮುಂದಿನ ಆಸ್ಟ್ರೇಲಿಯಾ (Australia) ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ನಿರ್ಣಾಯಕ ಎನಿಸಿಕೊಂಡಿದೆ. ಇದನ್ನೂ ಓದಿ: ಅಶ್ವಿನ್‌, ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ – ಕ್ಲೀನ್‌ ಸ್ವೀಪ್‌ಗೈದ ಭಾರತ

WTC FINAL

ಫೈನಲ್ ಲೆಕ್ಕಾಚಾರ:
ಇದೀಗ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಈಗಾಗಲೇ ಆಸ್ಟ್ರೇಲಿಯಾ ಒಟ್ಟು 13 ಪಂದ್ಯಗಳಲ್ಲಿ 9 ಜಯ, 1 ಸೋಲು ಮತ್ತು 3 ಡ್ರಾ ಸಾಧಿಸಿ 76.92 ಸರಾಸರಿಯೊಂದಿಗೆ 120 ಅಂಕ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು, 8 ಜಯ, 4 ಸೋಲು ಮತ್ತು 2 ಡ್ರಾ ಸಾಧಿಸಿ 58.93 ಸರಾಸರಿಯೊಂದಿಗೆ 99 ಅಂಕ ಸಂಪಾದಿಸಿದೆ. ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದ್ದು (South Africa), 11 ಪಂದ್ಯಗಳಿಂದ 54.55 ಸರಾಸರಿಯಲ್ಲಿ 72 ಅಂಕ ಪಡೆದಿದೆ. ಇನ್ನೂ 4ನೇ ಸ್ಥಾನದಲ್ಲಿ ಶ್ರೀಲಂಕಾವಿದ್ದು (Sri Lanka), 10 ಪಂದ್ಯಗಳಿಂದ 53.33 ಸರಾಸರಿಯಲ್ಲಿ 64 ಅಂಕ ಗಳಿಸಿಕೊಂಡಿದೆ.

Australia

ಇನ್ನುಳಿದಂತೆ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಮವಾಗಿ 5,6,7,8,9ನೇ ಸ್ಥಾನದಲ್ಲಿದೆ. ಈ 5 ತಂಡಗಳು ಬಹತೇಕ ಫೈನಲ್ ರೇಸ್‍ನಿಂದ ಹೊರಬಿದ್ದಿವೆ. ಇದೀಗ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳ ನಡುವೆ ಪೈಪೋಟಿ ಜೋರಾಗಿದೆ. ಇದನ್ನೂ ಓದಿ: 15ರ ಬಾಲಕನಿಗೆ ಕೈತಪ್ಪಿದ ಅವಕಾಶ ಹಿರಿಯ ಅಟಗಾರನಿಗೆ ಮಣೆ – 10 ತಂಡಗಳ ಫೈನಲ್ ಲಿಸ್ಟ್

South Africa

ಆಸ್ಟ್ರೇಲಿಯಾ ಬಹುತೇಕ ಫೈನಲ್ ಸ್ಥಾನ ಖಚಿತ ಪಡಿಸಿಕೊಂಡರೆ, ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ನಡುವೆ ಸ್ಪರ್ಧೆ ಏರ್ಪಟ್ದಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾ ಇನ್ನೆರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪೈಕಿ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆಲ್ಲಲೇ ಬೇಕು. ಈ ಸರಣಿ ಬಳಿಕ ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಆಡಳಿದೆ ಇದರಲ್ಲೂ ಜಯ ಸಾಧಿಸಿದರೆ ಮಾತ್ರ ಫೈನಲ್ ರೇಸ್‍ನಲ್ಲಿ ಉಳಿದುಕೊಳ್ಳಲಿದೆ.

Sri Lanka

ಇತ್ತ ಭಾರತಕ್ಕೆ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧ ಸರಣಿ ನಿರ್ಣಾಯಕವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಫೆಬ್ರವರಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಭಾರತ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇ ಬೇಕು ಆಗ ಮತ್ತೆ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ.

ಇನ್ನೊಂದು ತಂಡ ಶ್ರೀಲಂಕಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಎರಡು ಪಂದ್ಯ ಗೆಲ್ಲಬೇಕು ಜೊತೆಗೆ ಇತ್ತ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಪ್ರದರ್ಶನ ಅನುಸರಿಸಿ ಶ್ರೀಲಂಕಾಗೆ ಫೈನಲ್ ತಲುಪುವ ಅವಕಾಶವಿದೆ.

ಹಾಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ಕನಿಷ್ಠ 3 ಪಂದ್ಯವನ್ನು ಗೆಲ್ಲುವತ್ತ ಗಮನ ಹರಿಸಬೇಕಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *