ಊಟಕ್ಕಾಗಿ ಬಿಜೆಪಿಯಿಂದ ಜನರ ಕೋಟಿ-ಕೋಟಿ ಹಣ ಲೂಟಿ: ಜೀತು ಪಟ್ವಾರಿ

Public TV
2 Min Read
Congress MLA

ಭೋಪಾಲ್: ಬಿಜೆಪಿ (BJP) ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ (Chief Minister) ಮನೆಯಲ್ಲಿ ನಡೆದ ಪಕ್ಷದ ಸಭೆಗಳಲ್ಲಿ ಮಧ್ಯಾಹ್ನದ ಊಟ, ಚಹಾ ಮತ್ತು ರಾತ್ರಿಯ ಊಟಕ್ಕಾಗಿ 40 ಕೋಟಿ ರೂ. ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ (Congress) ಶಾಸಕ ಜೀತು ಪಟ್ವಾರಿ (Jitu Patwari) ಆರೋಪಿಸಿದ್ದಾರೆ.

Jitu Patwari

ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವೇಳೆ ಮಾತನಾಡಿದ ಅವರು, 2014-18ರ ಅವಧಿಯಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡುವುದಕ್ಕಾಗಿಯೇ ಸರ್ಕಾರ ಕೋಟಿಗಟ್ಟಲೇ ಸಾರ್ವಜನಿಕ ಹಣ ಖರ್ಚು ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಆಡಳಿತ ಪಕ್ಷದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ 90 ಬಾರಿ ಊಟದ ವ್ಯವಸ್ಥೆ ಮಾಡಲು ಹಣವನ್ನು ಖರ್ಚು ಮಾಡಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ (BJP) ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಶುದ್ಧ ಸುಳ್ಳು. ಸುಳ್ಳು ಹೇಳಿಕೆ ನೀಡಿರುವುದರ ವಿರುದ್ಧ `ಪ್ರಶ್ನಾ ಔರ್ ಸಂಬಂಧ ಸಮಿತಿ’ಗೆ (ಸದನದ ಉಲ್ಲೇಖ ಸಮಿತಿ) ದೂರು ಸಲ್ಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

Congress MLA 2

ಸದನದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಈ ಕುರಿತು ಉತ್ತರ ನೀಡುತ್ತಿದ್ದಂತೆ, ಪಟ್ವಾರಿ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಊಟದ ವ್ಯವಸ್ಥೆ ಪಡೆಯುವುದಕ್ಕೆ ಬಿಜೆಪಿ ಕಚೇರಿ ಎಂದು ನಮೂದು ಮಾಡಿರುವ ರಶೀದಿಗಳನ್ನ ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಕಪ್ ಚಹಾ 400 ರೂ.ಗೆ ಹಾಗೂ ಒಂದು ಪ್ಲೇಟ್ ಊಟಕ್ಕೆ 2 ಸಾವಿರ ರೂ. ವಿಧಿಸಲಾಗಿದೆ. ಒಂದು ವೇಳೆ ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಕಂಡುಬಂದರೆ ಅವರ ಸದನದ ಸದಸ್ಯತ್ವವನ್ನು ರದ್ದುಪಡಿಸಬಹುದು. ನಿಜವಾಗಿದ್ದರೆ, ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನೀವು ಸದನವನ್ನು ದಾರಿ ತಪ್ಪಿಸುತ್ತಿದ್ದೀರಿ. ಬಿಜೆಪಿ ಕಾರ್ಯಕರ್ತರಿಗೆ ಊಟ ಬಡಿಸಲು ಸರ್ಕಾರದ ಒಂದು ಪೈಸೆಯೂ ಖರ್ಚು ಮಾಡಿಲ್ಲ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ ಎಂದು ಹೇಳಿದರು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

Shivraj Singh Chouhan

ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಮಾತನಾಡಿ, ಪಟ್ವಾರಿ ಅವರ ಹೇಳಿಕೆ ಮಹಾ ಸುಳ್ಳು. ಬಿಜೆಪಿಗೆ ಧಕ್ಕೆ ತರಲು ಈ ರೀತಿ ಹೇಳಿಕೆಗಳನ್ನೂ ನೀಡಲಾಗುತ್ತಿದೆ. ಈ ಹಿಂದೆ ಕಮಲ್ ನಾಥ್ ಅವರು ಮುಖ್ಯಮಂತ್ರಿಯಾಗಿದ್ದಾಗ (ಡಿಸೆಂಬರ್ 2018 ಮತ್ತು ಮಾರ್ಚ್ 2020ರ ನಡುವೆ) ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ್ದ 131 ಕೋಟಿ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ರೂಪಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *