10 ಅಡಿ ಸುರಂಗ ಕೊರೆದು ಬ್ಯಾಂಕ್‍ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು

Public TV
1 Min Read
Thieves Dig 10 Foot Long Tunnel To SBI In Kanpur

ಲಕ್ನೋ: 10 ಅಡಿ ಉದ್ದದ ಸುರಂಗ (Tunnel) ಕೊರೆದು ಬ್ಯಾಂಕ್‍ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ (Gold) ದೋಚಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ (Kanpur) ನಡೆದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಖದೀಮರು (Thieves) 4 ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ. ಅದಾದ ಬಳಿಕ 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್‍ನ ವಾಲ್ಟ್‌ಗೆ ಪ್ರವೇಶಿಸಿದ್ದಾರೆ. ಬ್ಯಾಂಕ್‍ನಲ್ಲಿದ್ದ 1.8 ಕೆಜಿಗಿಂತಲೂ ಹೆಚ್ಚು ತೂಕವಿದ್ದ 1 ಕೋಟಿ ಮೌಲ್ಯದ ಚಿನ್ನದ ಪೆಟ್ಟಿಗೆಯನ್ನು ದೋಚಿದ್ದಾರೆ. ಆದರೆ 32 ಲಕ್ಷ ರೂ. ನಗದು ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗದಿದ್ದರಿಂದ ಅದನ್ನು ಹಾಗೇ ಅಲ್ಲಿಟ್ಟು ಹೋಗಿದ್ದಾರೆ.

Thieves Dig 10 Foot Long Tunnel To SBI In Kanpur 1

ಅಧಿಕಾರಿಗಳು ಬ್ಯಾಂಕ್‍ಗೆ ಬಂದಾಗ ಈ ಘಟನೆ ನಡೆದಿರುವುದನ್ನು ಗಮನಿಸಿದ್ದಾರೆ. ಜೊತೆಗೆ ಸುರಂಗ ತೋಡಿರುವುದರ ಬಗ್ಗೆಯೂ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ – ಪೊಲೀಸ್ ಇಲಾಖೆಗೆ ಹೆಚ್ಚಿದ ಟೆನ್ಶನ್

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಪೂರ್ಣ ನಕ್ಷೆಯ ಬಗ್ಗೆ ಚಿರಪರಿಚಿತರಿರುವರೇ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *