ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್

Public TV
1 Min Read
Sam Curran 1

ತಿರುವನಂತಪುರಂ: ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಇಂಗ್ಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಸ್ಯಾಮ್ ಕರ್ರನ್ (Sam Curran) 18.50 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಈ ಮೂಲಕ ಐಪಿಎಲ್ (IPL) ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

IPL AUCTION 1 1

ತೀವ್ರ ಪೈಪೋಟಿಯಿಂದ ಕೂಡಿದ ಬಿಡ್‍ನಲ್ಲಿ ಸ್ಯಾಮ್ ಕರ್ರನ್ ಖರೀದಿಸಲು ಪಂಜಾಬ್ ಹಾಗೂ ಮುಂಬೈ ನಡುವೆ ಬಾರಿ ಜಿದ್ದಾಜಿದ್ದು ಕಂಡುಬಂತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 18.50 ಕೋಟಿ ರೂ. ನೀಡಿ ಕರ್ರನ್‍ರನ್ನು ಖರೀದಿಸಿತು. ಈ ಮೂಲಕ ಕ್ರಿಸ್ ಮೋರಿಸ್ ಅವರ ಈ ಹಿಂದಿನ ದಾಖಲೆಯ ಬಿಡ್ ಪತನಗೊಂಡಿತು. ಈ ಹಿಂದೆ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು ಇದು ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಬಿಡ್ ಮೊತ್ತವಾಗಿತ್ತು. ಇದೀಗ ಈ ದಾಖಲೆಯನ್ನು ಕರ್ರನ್ ಮುರಿದು ನೂತನ ದಾಖಲೆಯೊಂದಿಗೆ ಬಿಕರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಇದನ್ನೂ ಓದಿ: ರನ್‌ ಓಡಲು ಪಂತ್‌ ನಿರಾಕರಣೆ – ಗುರಾಯಿಸಿದ ಕೊಹ್ಲಿ

MORRIES

ಸ್ಯಾಮ್ ಕರ್ರನ್ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಹಾಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿಯಾಗಿದೆ. ದಾಖಲೆಯ ಮೊತ್ತಕ್ಕೆ ಬಿಡ್ ಆಗಿದ್ದಾರೆ.

Sam Curran

ಕಳೆದ ಬಾರಿ ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‍ನ ಭಾಗವಾಗಿ ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *