ಮುಂಬೈ: ಪಿಕ್ನಿಕ್ (Picnic) ಮುಗಿಸಿ ಹಿಂದಿರುಗುತ್ತಿದ್ದ ಶಾಲಾ ಬಸ್ ಪಲ್ಟಿಯಾಗಿ (School Bus Accident) ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಮುಂಬೈ (Mumbai) ಬಳಿ ಇಂದು ಬೆಳಗ್ಗಿನ ಜಾವ ನಡೆದಿದೆ.
ಕೋಚಿಂಗ್ ತರಗತಿ ವಿದ್ಯಾರ್ಥಿಗಳು (Coaching Class) ಪಿಕ್ನಿಕ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ರಾಯಗಢ ಜಿಲ್ಲೆಯ ಖೋಪೋಲಿ ಎಂಬಲ್ಲಿ ದುರಂತ ಸಂಭವಿಸಿದೆ. ಇದನ್ನೂ ಓದಿ: ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಮುಂಬೈನ ಚೆಂಬೂರ್‌ನಲ್ಲಿರುವ ಕೋಚಿಂಗ್ ಕೇಂದ್ರದ 10ನೇ ತರಗತಿಯ 48 ವಿದ್ಯಾರ್ಥಿಗಳು (Students) ಮತ್ತು ಇಬ್ಬರು ಶಿಕ್ಷಕರು ಪ್ರಯಾಣಿಸುತ್ತಿದ್ದ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ (Mumbai Pune ExpressWay) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ. ಇದನ್ನೂ ಓದಿ: ಗೋಕಾಕ್ ತಹಶೀಲ್ದಾರ್ ಮನೆಯಲ್ಲಿ ಕಳ್ಳತನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಎಗರಿಸಿ ಪರಾರಿ
ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಲೋನಾವಾಲಾ, ಖೋಪೋಲಿ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.