ಸಮಂತಾ (Samantha) ಮತ್ತು ನಾಗಚೈತನ್ಯ (Nagachaitanya) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾದರೂ ಕೂಡ ಸದಾ ಒಂದಲ್ಲಾ ಒಂದು ವಿಷ್ಯವಾಗಿ ನಾಗಚೈತನ್ಯ ಸುದ್ದಿಯಲ್ಲಿರುತ್ತಾರೆ. ಸಮಂತಾ ಜೊತೆಗಿನ ಡಿವೋರ್ಸ್ ನಂತರ ಶೋಭಿತಾ (Shobitha) ಜೊತೆ ಓಡಾಟ ಜಾಸ್ತಿಯಾಗಿತ್ತು. ಇದೀಗ ಸ್ಟಾರ್ ಹೀರೋ ಮಗಳ ಜೊತೆಯಿರುವ ನಾಗಚೈತನ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
View this post on Instagram
ನಾಗಚೈತನ್ಯ ಜೀವನದಲ್ಲಿ ಸಮಂತಾ ಹೊರಗೋದ ಮೇಲೆ ಸದಾ ಚರ್ಚೆಯಲ್ಲಿರುತ್ತಾರೆ. ಈಗ ಸ್ಟಾರ್ ಹೀರೋ ವಿಕ್ಟರಿ ವೆಂಕಟೇಶ್ (Victory Venkatesh) ಪುತ್ರಿ ಜೊತೆಗಿರುವ ನಾಗಚೈತನ್ಯ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ವೆಂಕಟೇಶ್ ಪುತ್ರಿ ಆಶ್ರಿತಾ ದಗ್ಗುಭಾಟಿ (Ashritha Daggubati) ಸಂಬಂಧದಲ್ಲಿ ನಾಗಚೈತನ್ಯ ಅವರಿಗೆ ಮಾವನ ಮಗಳಾಗಬೇಕು.
ವಿಕ್ಟರಿ ವೆಂಕಟೇಶ್ ಪುತ್ರಿ ಆಶ್ರಿತಾ ಮತ್ತು ನಾಗಚೈತನ್ಯ ಒಟ್ಟಿಗೆ ಅಡುಗೆ ಮಾಡಿ, ಊಟ ಮಾಡುತ್ತಿರುವ ವೀಡಿಯೋ ಹಲವರ ಚರ್ಚೆಗೆ ಗ್ರಾಸವಾಗಿದೆ. ಆಶ್ರಿತಾ ಅವರು ವಿಶ್ವಾದ್ಯಂತ ಸೇವಿಸುವ ಪದಾರ್ಥವನ್ನ ಸ್ವತಃ ತಯಾರಿಸುವ ಮೂಲಕ ಅಡುಗೆ ಕಾರ್ಯಕ್ರಮವನ್ನು ಮಾಡುತ್ತಾರೆ. ಇದನ್ನೂ ಓದಿ: ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’
View this post on Instagram
ಹಾಗಾಗಿ ನಟ ನಾಗಚೈತನ್ಯ ಜೊತೆ ರುಚಿಕರವಾದ ಅಡುಗೆ ಮಾಡಿ, ಒಟ್ಟಿಗೆ ಊಟ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.