ನವದೆಹಲಿ: ದುಬೈನಿಂದ ಮಧುರೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನ ವಿಳಂಬವಾಗಿದೆ. ವಿಮಾನದ ಮುಂದಿನ ಚಕ್ರ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ವಿಮಾನ ವಿಳಂಬವಾಗಿದೆ. ಇದು ಕಳೆದ 24 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನಗಳು ತಾಂತ್ರಿಕ ದೋಷವನ್ನು ಎದುರಿಸುತ್ತಿರುವ 9ನೇ ಘಟನೆಯಾಗಿದೆ.
ವಿಟಿ-ಎಸ್‌ಝಡ್‌ಕೆ ನೋಂದಣಿ ಸಂಖ್ಯೆಯ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನ ಸೋಮವಾರ ಮಂಗಳೂರಿನಿಂದ ದುಬೈಗೆ ತೆರಳಿತ್ತು. ವಿಮಾನ ಲ್ಯಾಂಡ್ ಆದ ಬಳಿಕ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದಾಗ ಅದರ ಮುಂದಿನ ಚಕ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನ. 11ರಿಂದ ಒಂದು ತಿಂಗಳ ಕಾಲ ಬೆಂಗಳೂರು ಡಿಸೈನ್ ಫೆಸ್ಟಿವಲ್: ಅಶ್ವಥ್ ನಾರಾಯಣ
ತಾಂತ್ರಿಕ ದೋಷವನ್ನು ಕಂಡುಹಿಡಿದ ಬಳಿಕ ಸ್ಪೈಸ್‌ಜೆಟ್ ಆ ವಿಮಾನವನ್ನು ಅಲ್ಲಿಯೇ ಸ್ಥಗಿತಗೊಳಿಸಲು ನಿರ್ಧರಿಸಿ, ಮಧುರೈಗೆ ಹಿಂದಿರುಗಲು ಮುಂಬೈನಿಂದ ದುಬೈಗೆ ಇನ್ನೊಂದು ವಿಮಾನವನ್ನು ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ವಿಮಾನಯಾನ ಸಂಸ್ಥೆ ಕೊನೇ ಕ್ಷಣದ ತಾಂತ್ರಿಕ ಸಮಸ್ಯೆಯಿಂದ ವಿಮಾನ ವಿಳಂಬವಾಗಿದೆ ಎಂದು ಪ್ರಯಾಣಿಕರಿಗೆ ಸ್ಪಷ್ಟೀಕರಣ ನೀಡಿತು.
ಜುಲೈ 2 ರಂದು ಜಬ್ಬಲ್‌ಪುರಕ್ಕೆ ತೆರಳುತ್ತಿದ್ದ ವಿಮಾನ 5,000 ಅಡಿ ಎತ್ತರದಲ್ಲಿರುವಾಗ ಹೊಗೆ ಕಂಡುಬಂದಿತ್ತು. ಬಳಿಕ ಅದನ್ನು ದೆಹಲಿಯಲ್ಲಿ ಇಳಿಸಲಾಗಿತ್ತು. ಇದನ್ನೂ ಓದಿ: ಸಿಎಂಗೆ ಕಳಪೆ ಗುಣಮಟ್ಟದ ಟೀ ನೀಡಿದ್ದ ಅಧಿಕಾರಿಗೆ ಶೋಕಾಸ್ ನೋಟಿಸ್
ಸ್ಪೈಸ್‌ಜೆಟ್ ವಿಮಾನಗಳಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಕಂಡುಬರುತ್ತಿರುವುದರಿಂದ ಜೂನ್ 19ರಂದು ಡಿಜಿಸಿಎ ಕಂಪನಿಗೆ ಶೋಕಾಸ್ ನೀಡಿತ್ತು. ಇದು 24 ದಿನಗಳಲ್ಲಿ ವರದಿಯಾಗಿರುವ ಸ್ಪೈಸ್‌ಜೆಟ್‌ನ ತಾಂತ್ರಿಕ ದೋಷದ 9ನೇ ಘಟನೆಯಾಗಿದೆ.