ಬೆಂಗಳೂರು: ಅಪಾರ್ಟ್ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
13 ವರ್ಷದ ವೈಷ್ಣವಿ ಮೃತ ದುರ್ದೈವಿ. ಉತ್ತರಪ್ರದೇಶ ಮೂಲದ ವೀರೇಂದ್ರಕುಮಾರ್ ಹಾಗೂ ಸುಮನ್ ದಂಪತಿಯ ಪುತ್ರಿ ವೈಷ್ಣವಿ. ಈ ದಂಪತಿ ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ವೇಣುಗೋಪಾಲ ನಗರದ ನಿತೀಶ್ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದಾರೆ. ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಕೆಳಗೆ ಬಿದ್ದು ಈ ಅವಘಡ ಸಂಭವಿಸಿದೆ. ಖಾಸಗಿ ಶಾಲೆಯಲ್ಲಿ ವೈಷ್ಣವಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
Advertisement
Advertisement
ರಾತ್ರಿ ಕುಟುಂಬದವರ ಜೊತೆ ಕುಳಿತು ಊಟ ಮಾಡಿದ್ದಳು. ಹಾಲಿನಲ್ಲಿ ಮನೆಯವರು ಕುಳಿತಿದ್ದರು. ವೈಷ್ಣವಿ ಬಾಲ್ಕನಿಯಲ್ಲಿ ಲಾಕ್ ಮಾಡಿಕೊಂಡು ಆಟವಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಏನೋ ಬಿದ್ದ ರೀತಿ ಶಬ್ದ ಕೇಳಿದ ಕುಟುಂಬಸ್ಥರು ಬಾಲ್ಕನಿ ಬಳಿ ಹೋಗಿ ನೋಡಿದ್ದಾರೆ. ಆದರೆ ಅಲ್ಲಿ ಬಾಲ್ಕನಿಯಿಂದ ವೈಷ್ಣವಿ ಕೆಳಗೆ ಬಿದ್ದಿದ್ದು ಕಂಡಿದೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ವೈಷ್ಣವಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ
Advertisement
ಘಟನೆ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯೋ ಅಥವಾ ಆಯತಪ್ಪಿ ಬಿದ್ದಳು ಎಂಬುದರ ಬಗ್ಗೆ ಪೊಲೀಸರಿಂದ ತನಿಖೆ ನಂತರ ತಿಳಿಯಬೇಕಾಗಿದೆ. ಇದನ್ನೂ ಓದಿ: ವಿಶೇಷ ಕ್ಲಸ್ಟರ್ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚು: ಬೊಮ್ಮಾಯಿ