ನವದೆಹಲಿ: ವೈವಾಹಿಕ ಜೀವನದಲ್ಲಿ ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ ಎಂದು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಹೇಳಿಕೆ ನೀಡಿದ್ದು, ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತುಲ್ ಸುಭಾಷ್‌ಗೆ (Atul Subhash Suicide Case) ಆತ್ಮಹತ್ಯೆಗೂ ಮುಂಚೆ ಹರಿಬಿಟ್ಟಿರುವ ವಿಡಿಯೋ ಅವರ ಪತ್ನಿ ಯಾವ ಮಟ್ಟದಲ್ಲಿ ಕಿರುಕುಳ ನೀಡಿದ್ದರೆಂದು ತಿಳಿಯುತ್ತದೆ. ಆತನಿಂದ ಸಾಮರ್ಥ್ಯ ಮೀರಿ ಕೋಟ್ಯಂತರ ಹಣ ವದೂಲಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 12-12-2024
Advertisement
Advertisement
ಈ ಆತ್ಮಹತ್ಯೆಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಅವರ ವಿಡಿಯೋ ಹೃದಯ ವಿದ್ರಾವಕವಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ಆ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರಿಂದ ಈ ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಮಹಿಳೆಯ ತಪ್ಪಿನ ಉದಾಹರಣೆಯನ್ನು ಇಟ್ಟುಕೊಂಡು ದಿನವೂ ಕಿರುಕುಳಕ್ಕೊಳಗಾಗುವ ಮಹಿಳೆಯರ ಸಂಖ್ಯೆಯನ್ನು ಅಲ್ಲಗಳೆಯುವಂತಿಲ್ಲ. ವೈವಾಹಿಕ ಜೀವನದಲ್ಲಿ ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ ಎಂದು ಹೇಳಿದರು.
Advertisement
ಏನಿದು ಪ್ರಕರಣ?
ಉತ್ತರ ಪ್ರದೇಶ (Uttar Pradesh) ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿವರಿಸಿದ್ದರು.
Advertisement
ಸುಭಾಷ್ ಹೇಳಿದ್ದೇನು?
ಪತ್ನಿ ನಿಖಿತಾ ಹಾಗೂ ಆಕೆಯ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದರು. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನ್ನ ಮೇಲೆ 9 ಪ್ರಕರಣ ದಾಖಲಿಸಿದ್ದರು. ಆರು ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದರೆ ಮೂರು ಪ್ರಕರಣಗಳು ಹೈಕೋರ್ಟ್ನಲ್ಲಿದೆ. ನಾನು ಬೆಂಗಳೂರಿನಲ್ಲಿದ್ದರೂ 9 ಪ್ರಕರಣಗಳ ವಿಚಾರಣೆಗಾಗಿ ಪದೇ ಪದೇ ಉತ್ತರ ಪ್ರದೇಶಕ್ಕೆ ಹೋಗಬೇಕಿತ್ತು. ಪತ್ನಿ ಕುಟುಂಬದವರ ಹಣದ ಬೇಡಿಕೆಯನ್ನು ಈಡೇರಿಸಿ ನನಗೆ ಸಾಕಾಗಿ ಹೋಗಿದೆ. ನಾನು ದುಡಿದ ಹಣವನ್ನು ಶತ್ರುಗಳಿಗೆ ನೀಡುತ್ತಿದ್ದೆ. ನನ್ನ ದುಡ್ಡಿನಿಂದ ಬಲವಾಗುತ್ತಿದ್ದ ಅವರು ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಒಂದು ಬಾರಿ ಒಂದು ಪ್ರಕರಣವನ್ನು ಪತ್ನಿ ವಾಪಸ್ ಪಡೆದಿದ್ದಳು. ವಾಪಸ್ ಪಡೆದ ನಂತರ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಳು.
ಹಣ ಪಡೆಯಲೆಂದೇ ನನ್ನ ಮೇಲೆ ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದರೂ ಕೋರ್ಟ್ ಪತ್ನಿಯ ಪರವಾಗಿಯೇ ಇರುವಂತೆ ವರ್ತಿಸಿತ್ತು. ಉತ್ತರ ಪ್ರದೇಶದ ಕೋರ್ಟ್ಗಿಂತಲೂ ಬೆಂಗಳೂರಿನ ಕೋರ್ಟ್ಗಳು ಹೆಚ್ಚು ನ್ಯಾಯದ ಪರವಾಗಿವೆ. ನನ್ನ ಎಲ್ಲಾ ಕೇಸ್‌ಗಳನ್ನು ಕರ್ನಾಟಕದಲ್ಲಿ ನಡೆಸಬೇಕು ಎನ್ನುವುದು ನನ್ನ ಮನವಿ. ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ ವಿಚಾರಣೆ ಮುಗಿಯುವವರೆಗೂ ಪತ್ನಿಯನ್ನು ಬೆಂಗಳೂರಿನಲ್ಲಿಯೇ ನ್ಯಾಯಾಂಗ ಬಂಧನದಲ್ಲಿ ಇಡಬೇಕು.
ಉತ್ತರಪ್ರದೇಶದ ಜೌನ್‌ಪುರದಲ್ಲಿ ಅತುತ್ ಸುಭಾಷ್ ಪರವಾಗಿ ವಾದಿಸಿದ್ದ ವಕೀಲ ಅವಧೇಶ್ ತಿವಾರಿ ಪ್ರತಿಕ್ರಿಯಿಸಿ, ವರದಕ್ಷಿಣೆ, ಹಲ್ಲೆ ಮತ್ತು ಜೀವನಾಂಶದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಜುಲೈ 2024 ರಲ್ಲಿ ನ್ಯಾಯಾಲಯದ ಮಗನ ಪೋಷಣೆಗಾಗಿ ಮಾಸಿಕ 40,000 ರೂ. ಪಾವತಿಸುವಂತೆ ಆದೇಶಿಸಿತ್ತು. ಆದರೆ ಪತ್ನಿ ಮಾಡಿದ ಹೆಚ್ಚುವರಿ ಬೇಡಿಕೆಗಳನ್ನು ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 12-12-2024