– ಶೇ.90 ರಷ್ಟು ಬಂಡವಾಳ ಹೂಡಿಕೆಗಳು ಬೆಂಗಳೂರಿನ ಆಚೆ ಆಗುತ್ತಿದೆ
– 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
– 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ (Global Investors Meet) ದಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ (Murugesh Nirani) ತಿಳಿಸಿದ್ದಾರೆ.
Dr. Murugesh R Nirani, Minister for Large and Medium Industries, will address the media to share details of Global Investors Meet 2022 https://t.co/KEPBN16ff9
— Dr. Murugesh R Nirani (@NiraniMurugesh) November 5, 2022
Advertisement
ಜಾಗತಿಕ ಹೂಡಿಕೆದಾರರ ಸಮಾವೇಶದ ವಿವರಗಳನ್ನು ಹಂಚಿಕೊಳ್ಳಲು ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ ಎಂದು ಅವರು ಹೇಳಿದರು.
Advertisement
Advertisement
ಮೂರು ದಿನಗಳ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು, ಈ ಪೈಕಿ ಲಕ್ಷ ಕೋಟಿ ರೂ. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5, 41,369 ಕೋಟಿ ರೂ. ಮೊತ್ತದ 57 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 1,57,000 ಕೋಟಿ ರೂ. ಮೊತ್ತದ 2 ಯೋಜನೆಗಳನ್ನು ಸಮಾವೇಶದಲ್ಲಿ ಘೋಷಿಸಲಾಗಿದೆ ಎಂದು ಅವರು ವಿವಿರ ನೀಡಿದರು.
Advertisement
Dr. Murugesh R Nirani, Minister for Large and Medium Industries, will address the media to share details of Global Investors Meet 2022 https://t.co/yPnzrl5Cd6
— Dr. Murugesh R Nirani (@NiraniMurugesh) November 5, 2022
ವಿವಿಧ ಉದ್ಯಮಿಗಳು (Businessman) 2 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಪ್ರಸ್ತಾವನೆಗಳೊಂದಿಗೆ ಬಂದಿದ್ದರು. ಆದರೆ ಈ ಯೋಜನೆಗಳಿಗೆ ಭೂಮಿ, ವಿದ್ಯುತ್, ಕಚ್ಚಾ ವಸ್ತುಗಳು, ಸಬ್ಸಿಡಿ ಸೇರಿದಂತೆ ವಿವಿಧ ವಿಷಯಗಳು ಇತ್ಯರ್ಥವಾಗಬೇಕಾಗಿರುವುದರಿಂದ ಒಪ್ಪಂದ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಉದ್ಯಮಿಗಳೊಂದಿಗೆ ನಮ್ಮ ಅಧಿಕಾರಿಗಳು ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದಲ್ಲೇ ಮೊದಲ ಏಥರ್ ಕಂಪೆನಿಯ ಇವಿ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ
90 ದಿನಗಳೊಳಗೆ ಅನುಮೋದನೆ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳನ್ನು ತೊಂಬತ್ತು ದಿನದೊಳಗೆ ಅನುಮೋದನೆ ನೀಡಲಾಗುವುದು. ಒಡಂಬಡಿಕೆಗಳ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮುಖ್ಯವಾಗಿ ಈ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳ ಪೈಕಿ ಅಂದಾಜು ಶೇ.70ರಷ್ಟು ಯೋಜನೆಗಳು ಅನುಷ್ಠಾನಗೊಳ್ಳುವ ವಿಶ್ವಾಸ ಇದೆ ಎಂದು ಅವರು ವಿವರಿಸಿದರು.
In 2000, investment signed Rs. 27,057 Cr, 44% realised. In 2010, MOU for Rs 3,94,768 Cr signed,14% realised. In 2012, Rs 6,77,158 Cr signed, 8% realized. In 2016, Rs 3.05 lakh Cr promised, 15% realized. Invest Karnataka won’t let it happen.
1/2 pic.twitter.com/rx71eXSOyH
— Basavaraj S Bommai (@BSBommai) November 4, 2022
ಬಿಯಾಂಡ್ ಬೆಂಗಳೂರು: ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸುವುದು ಈ ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಸಮಾವೇಶದಲ್ಲಿ ಆಗಿರುವ ಒಟ್ಟು ಒಪ್ಪಂದಗಳ ಪೈಕಿ ಶೇ.90ರಷ್ಟು ಬೆಂಗಳೂರಿನ ಆಚೆ ಆಗುತ್ತಿದೆ. ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಸಚಿವರು ಪ್ರಶಂಸಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ
ಪತ್ರಿಕಾ ಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿನ ಡಾ. ಇ ವಿ ರಮಣ ರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]