Dakshina KannadaDistrictsKarnatakaLatestMain Post

ದೇಶದಲ್ಲೇ ಮೊದಲ ಏಥರ್ ಕಂಪೆನಿಯ ಇವಿ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ

ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಏಥರ್ ಕಂಪೆನಿಯ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯು ಶನಿವಾರದಿಂದ ತನ್ನ ಒಡೆತನದ ಪೆಟ್ರೋಲ್ ಪಂಪ್ ಆಗಿರುವ ಇಲ್ಲಿನ ವಿಜಯ ಫ್ಯೂಲ್ ಪಾರ್ಕ್‌ನಲ್ಲಿ ಪ್ರಾರಂಭಿಸಿತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ (Bharat Shetty) ಅವರು ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಏಥರ್ ಕಂಪೆನಿಯ ಸಹಭಾಗಿತ್ವದಲ್ಲಿ ದ್ವಿಚಕ್ರ ಚಾರ್ಜಿಂಗ್ ಸ್ಟೇಷನ್ ಅನ್ನು ಹೆಚ್‌ಪಿಸಿಎಲ್ (HPCL) ಸುರತ್ಕಲ್‌ನಲ್ಲಿ (Surathkal) ಪ್ರಾರಂಭಿಸಿದ್ದು, ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಿದೆ. ಡಿಸೆಂಬರ್ ಅಂತ್ಯದವರೆಗೆ ಫ್ರೀ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲೇ ಮೊದಲ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್ ನ ಆಯ್ದ ಪಂಪ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಒಂದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು ಉಳಿದಂತೆ ನಾರ್ಮಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಮಂಗಳೂರು ಟರ್ಮಿನಲ್ ಇನ್ಸ್ಟಾಲೇಷನ್ ವಿಭಾಗದ ಡಿಜಿಎಂ ಬೊಪ್ಪೆ ಸೂರ್ಯಲಿಂಗಂ, ಏರಿಯಾ ಸೇಲ್ಸ್ ಮೆನೇಜರ್ ಕೆ. ಉದಯ್ ಶಂಕರ್ ಶೆಟ್ಟಿ, ರಿಟೇಲ್ ವಿಭಾಗದ ಸೀನಿಯರ್ ಮೆನೇಜರ್ ಪ್ರದೀಪ್ ಕುಮಾರ್, ಮೆನೇಜರ್ ವಸಂತ ಬಿ. ಶೆಟ್ಟಿ, ಸೀನಿಯರ್ ಮೆನೇಜರ್ ಪಿ. ಪ್ರಕಾಶ್, ರೆಂಜಿತ್ ರಾಜನ್, ಹೆಚ್ ಪಿಸಿಎಲ್ ಗುತ್ತಿಗೆದಾರ ಶಿವಪ್ರಸಾದ್ ಶೆಟ್ಟಿ, ಏಥರ್ ಸಂಸ್ಥೆಯ ಟೀಮ್ ಮೆನೇಜರ್ ಭರತ್ ಕುಮಾರ್, ವಿಜಯ ಫ್ಯೂಲ್ ಪಾರ್ಕ್ ಮಾಲಕ ಡಿ. ದಯಾನಂದ ಶೆಟ್ಟಿ, ಹರ್ಷಿಣಿ ಶೆಟ್ಟಿ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರದೀಪ್, ಮೀರಾ ಶೆಟ್ಟಿ, ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕುಸಿದ ಬೆಲೆ- ರಸ್ತೆಗೆ ಹೂವು ಚೆಲ್ಲಿ ರೈತ ಕಣ್ಣೀರು

Live Tv

Leave a Reply

Your email address will not be published. Required fields are marked *

Back to top button