ಲಕ್ನೋ: ಐದು ವರ್ಷದಿಂದ ಜೈಲು (Jail) ಶಿಕ್ಷೆ ಅನುಭವಿಸುತ್ತಿದ್ದ 98 ವರ್ಷದ ವೃದ್ಧ ಬಿಡುಗಡೆಗೊಂಡಿದ್ದು, ಅವನನ್ನು ಅಲ್ಲಿನ ಪೊಲೀಸರು (Police) ಬೀಳ್ಕೊಡುಗೆ ಸಮಾರಂಭ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ (Ayodhya) ರಾಮ್ ಸೂರತ್ (98) ಹಲ್ಲೆ ಹಿನ್ನೆಲೆಯಲ್ಲಿ ಕಳೆದ 5 ವರ್ಷದ ಹಿಂದೆ ಜೈಲು ಸೇರಿದ್ದರು. ಆದರೆ ಇದೀಗ ಆ ಶಿಕ್ಷೆಯನ್ನು ಪೂರೈಸಿ ಬಿಡುಗಡೆಯಾಗಿದ್ದಾನೆ. ಈ ವೇಳೆ ರಾಮ್ ಸೂರತ್‍ಗೆ ಅಲ್ಲಿನ ಪೊಲೀಸ್ ಸಿಬ್ಬಂದಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.
Advertisement
परहित सरिस धर्म नहीं भाई . 98 वर्षीय श्री रामसूरत जी की रिहाई पर लेने कोई नहीं आया . अधीक्षक जिला जेल अयोध्या श्री शशिकांत मिश्र पुत्रवत अपनी गाड़ी से घर भेजते हुए . @rashtrapatibhvn @narendramodi @myogiadityanath @dharmindia51 pic.twitter.com/qesldPhwBB
— DG PRISONS U.P (@DgPrisons) January 8, 2023
Advertisement
ಅಷ್ಟೇ ಅಲ್ಲದೇ ಅವನಿಗೆ ಅಯೋಧ್ಯಾ ಜೈಲಿನ ಜಿಲ್ಲಾ ಅಧೀಕ್ಷಕ ಶಶಿಕಾಂತ್ ಮಿಶ್ರಾ ಪುತ್ರಾವತ್ ಅವರು ರಾಮ್ ಸೂರತ್ ಮನೆಗೆ ತಲುಪಲು ಬೆಂಗಾವಲು (ಎಸ್ಕಾರ್ಟ್) ನೀಡಿದ್ದಾರೆ. ಈ ಬಗ್ಗೆ ಡಿಜಿ ಪ್ರಿಸನ್ಸ್ ಯುಪಿ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದ್ದು, ಅದರಲ್ಲಿ ರಾಮ್ ಸೂರತ್‍ಗೆ ಮುಂದಿನ ಜೀವನ ಚೆನ್ನಾಗಿರಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!
Advertisement
Advertisement
ವೀಡಿಯೋದಲ್ಲಿ ರಾಮ್ ಸೂರತ್ ಸಂಬಂಧಿಗಳು ಯಾರೂ ಬಂದಿಲ್ಲದೇ ಇರುವುದನ್ನು ಗಮನಿಸಬಹುದಾಗಿದೆ. ರಾಮ್ ಸೂರತ್ ಐಪಿಸಿ ಸೆಕ್ಷನ್ 452, 323, 352 ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದರು. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗನಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರೇವಣ್ಣ ಆಪ್ತರು ಬಂಡಾಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k