ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಗೌರವ

Public TV
1 Min Read
madel

ನವದೆಹಲಿ: 73ನೇ ಗಣರಾಜೋತ್ಸವ ಹಿನ್ನಲೆ ಇಂದು ಪೊಲೀಸ್ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಿಸಿದೆ. ದೇಶದ 939 ಪೊಲೀಸ್ ಸಿಬ್ಬಂದಿ ಈ ಬಾರಿ ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದಾರೆ.

INDIAN FLAG

939 ಪೊಲೀಸ್ ಸಿಬ್ಬಂದಿ ಪೈಕಿ 189 ಅಧಿಕಾರಿಗಳಿಗೆ ಶೌರ್ಯಕ್ಕಾಗಿ ಪದಕ ನೀಡಲಾಗುತ್ತಿದ್ದು, 88 ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಘೋಷಿಸಲಾಗಿದೆ. ಗೌರವಾನ್ವಿತ ಸೇವೆಗಾಗಿ 662 ಮಂದಿಗೆ ಪೊಲೀಸ್ ಪದಕ ಘೋಷಿಸಿದೆ. ಇದನ್ನೂ ಓದಿ: ನನ್ನ ಜೊತೆ ಬಿಜೆಪಿ, ಜೆಡಿಎಸ್‍ನ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ

ಪಟ್ಟಿಯಲ್ಲಿ ರಾಜ್ಯದ ಗುಪ್ತಚರ ಇಲಾಖೆಯ ಎಡಿಜಿಪಿ ಬನ್ನಿಕಲ್ ದಯಾನಂದ್ ಮತ್ತು ಕ್ರೈಂ ಆ್ಯಂಡ್ ಟೆಕ್ನಿಕಲ್ ಸರ್ವಿಸ್ ವಿಭಾಗದ ಎಡಿಜಿಪಿ ಹಿತೇಂದ್ರ ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

ಇನ್ನು ಗೌರವಾನ್ವಿತ ಸೇವೆಗಾಗಿ ರಾಜ್ಯದ 19 ಅಧಿಕಾರಿಗಳಿಗೆ ಪೊಲೀಸ್ ಪದಕ ನೀಡಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಅಧಿಕಾರಿಗಳು ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Share This Article