– ಪರ್ಯಾಯ ಮಾರ್ಗ ಹೀಗಿದೆ
ಬೆಂಗಳೂರು: ವೈಟ್ ಟ್ಯಾಪಿಂಗ್ ಕಾಮಗಾರಿ ಹಿನ್ನೆಲೆ ಮುಂದಿನ 90 ದಿನ ಬೆಂಗಳೂರಿನ ಪ್ರಮುಖ ರಸ್ತೆ ಗೂಡ್ ಶೆಡ್ ರೋಡ್ ಬಂದ್ ಆಗುತ್ತಿದೆ. ಗೂಡ್ ಶೆಡ್ ರೋಡ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
Advertisement
ಬಿಜಿಎಸ್ ಮೇಲ್ಸೇತುವೆಯ ಅಂಬೇಡ್ಕರ್ ಡೌನ್ ರ‍್ಯಾಂಪ್ ನಿಂದ ಡಾ.ಟಿಸಿಎಂ ರಾಯನ್ ಸರ್ಕಲ್ ವರೆಗೂ 1.5 ಕಿಮೀ ವರೆಗೂ ವೈಟ್ ಟ್ಯಾಪಿಂಗ್ ಕೆಲಸ ನಡೆಯಲಿದ್ದು, 90 ದಿನಗಳ ಕಾಲ ರಸ್ತೆ ಬಂದ್ ಆಗಲಿದೆ. ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಈಗ ರಸ್ತೆ ಬಂದ್ ಆಗುತ್ತಿರೋದರಿಂದ ಪರ್ಯಾಯ ಮಾರ್ಗ ಅನುಸರಿಸಬೇಕಾಗುತ್ತದೆ.
Advertisement
Advertisement
ಒಟ್ಟು ಎರಡು ಹಂತದಲ್ಲಿ ವೈಟ್ ಟ್ಯಾಪಿಂಗ್ ನಡೆಯಲಿದೆ. ಮೊದಲ ಹಂತದಲ್ಲಿ ಅಂಬೇಡ್ಕರ್ ಡೌನ್ ರ‍್ಯಾಂಪ್ ನಿಂದ ಬೇಲಿ ಮಠದ ರಸ್ತೆವರೆಗೆ ಮತ್ತು ಎರಡನೇ ಹಂತದ ಕಾಮಗಾರಿ ಕಾಟನ್‍ಪೇಟೆಯ ಅಡ್ಡ ರಸ್ತೆವರೆಗೆ ನಡೆಯಲಿದೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ
Advertisement
ಪರ್ಯಾಯ ಮಾರ್ಗ ಹೇಗೆ?
ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಾಗುವ ವಾಹನಗಳು ಮೈಸೂರು ರಸ್ತೆಯ ಬಾಡಿ ಬಿಲ್ಡರ್ ಜಂಕ್ಷನ್ ನಿಂದ ಸರ್ವಿಸ್ ರಸ್ತೆಯ ಮೂಲಕ ಸಿರ್ಸಿ ಜಂಕ್ಷನ್ ಬಂದು ಬಳಿಕ ಎಡ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆಯ ಬಾಳೆಕಾಯಿ ಮಂಡಿ ಜಂಕ್ಷನ್ ಗೆ ಬಂದು ಬಿನ್ನಿ ಮಿಲ್ ಜಂಕ್ಷನ್ ನಿಂದ ಬಲ ತಿರುವು ಪಡೆದು ಟಿಸಿಎಂ ರಾಯನ್ ಸರ್ಕಲ್ ಗೆ ಬಂದು ಶಾಂತಲ ಸಿಲ್ಕ್ ರೋಡ್ ಮೂಲಕ ಮೆಜೆಸ್ಟಿಕ್ ತಲುಪಬಹುದು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ – ಕೊರೊನಾ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಜನ