ಬ್ರಸೆಲ್ಸ್: ಬೆಲ್ಜಿಯಂನ ಒಂಬತ್ತು ವರ್ಷದ ಬಾಲಕ ಈ ತಿಂಗಳ ಅಂತ್ಯದ ವೇಳೆಗೆ ವಿಶ್ವದ ಕಿರಿಯ ಪದವೀಧರ ಆಗಲಿದ್ದ. ಆದರೆ ಈಗ ವಿಶ್ವವಿದ್ಯಾಲಯವನ್ನು ತೊರೆದು ಹೊರ ಬಂದಿದ್ದಾನೆ.
ಬೆಲ್ಜಿಯಂನ ಒಂಬತ್ತು ವರ್ಷದ ಲಾರೆಂಟ್ ಸೈಮನ್ಸ್ ಒಂದು ವರ್ಷದಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿದ್ದ. ಬಳಿಕ 2018ರಲ್ಲಿ ನೆದರ್ಲೆಂಡ್‍ನ ಐಂಡ್‍ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಲು ಸೇರಿ ವಿಶ್ವದ ಗಮನ ಸೆಳೆದಿದ್ದ.
Advertisement
Advertisement
ಅಮೆರಿಕದ ಮೈಕೆಲ್ ಕೀರ್ನಿ ಪ್ರಸ್ತುತ ವಿಶ್ವದ ಅತ್ಯಂತ ಕಿರಿಯ ಪದವೀಧರರಾಗಿದ್ದು, ಅವರು 1994ರಲ್ಲಿ ತಮ್ಮ 10 ವರ್ಷ 4 ತಿಂಗಳ ವಯಸ್ಸಿನಲ್ಲಿ ಪದವಿಯನ್ನು ಪಡೆದಿದ್ದರು. ಈ ದಾಖಲೆಯನ್ನು ಲಾರೆಂಟ್ ಹಿಂದಿಕ್ಕಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವವಿದ್ಯಾಲಯ ಪದವಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಲಾರೆಂಟ್ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಲಾರೆಂಟ್ ಸೈಮನ್ಸ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಸೇರಿಕೊಂಡ 10 ತಿಂಗಳಲ್ಲೇ ಪರೀಕ್ಷೆ ಬರೆದು, ಡಿಸೆಂಬರ್ ಅಂತ್ಯದಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದ. ಆದರೆ ಲಾರೆಂಟ್ ಅವರ ಎಲ್ಲಾ ಪರೀಕ್ಷೆಗಳು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಅವರು ಮುಂದಿನ ವರ್ಷ ಜುಲೈನಲ್ಲಿ ಪದವಿ ಪಡೆಯಬಹುದು ಎಂದು ವಿಶ್ವವಿದ್ಯಾಲಯ ಹೇಳಿದೆ. ವಿಶ್ವವಿದ್ಯಾನಿಲಯವು ಪದವಿ ನೀಡುವ ದಿನಾಂಕವನ್ನು ಬದಲಾಯಿಸಿದ್ದು ಲಾರೆಂಟ್ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಅವರು ಮಗನನ್ನು ವಿಶ್ವವಿದ್ಯಾನಿಲಯ ಬಿಡಿಸಲು ನಿರ್ಧರಿಸಿದರು. ಜೊತೆಗೆ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆದಿದ್ದಾರೆ.
Advertisement
ಈ ವಿಚಾರವಾಗಿ ಲಾರೆಂಟ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಇ-ಮೇಲ್‍ನ ಸ್ಕ್ರೀನ್ಶಾಟ್ ಹಂಚಿಕೊಂಡು, ನನ್ನ ಅಧ್ಯಯನ ಉತ್ತಮವಾಗಿ ನಡೆಯುತ್ತಿದ್ದು, ಡಿಸೆಂಬನರ್ ನಲ್ಲಿ ಪರೀಕ್ಷೆ ಕೊನೆಗೊಳ್ಳಬೇಕಿತ್ತು. ಆದರೆ ಪದವಿ ಪ್ರಮಾಣ ಪತ್ರ ನೀಡಲು ವಿಶ್ವವಿದ್ಯಾಲಯ ಸತಾಯಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಲಾರೆಂಟ್ ಅವರ ತಂದೆ ಅಲೆಗ್ಸಾಂಡರ್, ಕಳೆದ ತಿಂಗಳವರೆಗೆ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರ ನೀಡಲು ಆರು ತಿಂಗಳ ವಿಳಂಬ ನೀತಿ ಅನುಸರಿಸಿತ್ತಿದೆ. ವಿಶ್ವವಿದ್ಯಾಲಯದ ಈ ನಡೆ ಸರಿಯಲ್ಲ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಬಳಿಕ ಮಗನಿಗೆ ಪಿಎಚ್‍ಡಿ ಮಾಡಿಸುವ ಯೋಜನೆ ಇತ್ತು. ಲಾರೆಂಟ್‍ಗೆ ವಿಶ್ವವಿದ್ಯಾಲಯಗಳಿಂದ ಆಫರ್ ಬಂದಿದೆ. ಈ ಬಗ್ಗೆ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.