ಯಾದಗಿರಿ: ಜಿಲ್ಲೆಯ ಕಾಕಲವಾರ (Kakalwar) ಗ್ರಾಮದಲ್ಲಿ ಕಲುಷಿತ ನೀರು (Contaminated Water) ಸೇವಿಸಿ 9 ಮಂದಿ ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಿನ್ನೆಲೆ ಪಿಡಿಒ (PDO) ಅಮಾನತು (Suspension) ಮಾಡಿ ಸಿಇಓ ಗರೀಮಾ ಪನ್ವಾರ್ ಆದೇಶಿಸಿದ್ದಾರೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮ ಪಂಚಾಯತ್ ಪಿಡಿಒ ಮಲ್ಲರೆಡ್ಡಿಯನ್ನು ಅಮಾನತು ಮಾಡಲಾಗಿದೆ. ಕುಡಿಯಲು ಯೋಗ್ಯವಲ್ಲದ ನೀರು ಎಂದು ವರದಿ ಬಂದರೂ ನೀರು ಪೂರೈಕೆ ಮಾಡಿದ್ದು, ಕಲುಷಿತ ನೀರನ್ನು ಸೇವಿಸಿದ 9 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗ್ರಾಮದ ಮೂರು ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿತ್ತು. ಆದರೂ ಪಿಡಿಒ ಮಲ್ಲರೆಡ್ಡಿ ಯೋಗ್ಯವಲ್ಲದ ನೀರನ್ನೇ ಗ್ರಾಮಸ್ಥರಿಗೆ ಕುಡಿಯಲು ಪೂರೈಸಿದ್ದರು. ಈ ಹಿನ್ನೆಲೆ ಕರ್ತವ್ಯಲೋಪ ಆಧಾರದ ಮೇಲೆ ಸಸ್ಪೆಂಡ್ ಮಾಡಿ ಸಿಇಒ ಆದೇಶ ನೀಡಿದ್ದಾರೆ. ಇದನ್ನೂ ಓದಿ: ನನ್ನ ಸ್ನೇಹಿತ ಟ್ರಂಪ್ ಮೇಲಿನ ದಾಳಿಯಿಂದ ಕಳವಳಗೊಂಡಿದ್ದೇನೆ: ದಾಳಿಗೆ ಪ್ರಧಾನಿ ಮೋದಿ ಖಂಡನೆ
ಘಟನೆ ಆದ ಕೂಡಲೇ ಸಿಇಒ ಗರೀಮಾ ಪನ್ವಾರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಪಿಡಿಒ ನಿರ್ಲಕ್ಷ್ಯವೇ ಪ್ರಕರಣಕ್ಕೆ ಕಾರಣ ಎಂಬುದನ್ನು ಅರಿತು ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೈಕ್‌ಗೆ ಕಾರು ಡಿಕ್ಕಿ – ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು