ಶಿವಮೊಗ್ಗ: ನಗರದ (Shivamogga) ವಿಶಾಲ್ ಮಾರ್ಟ್ (Vishal Mart) ಕಟ್ಟಡದ ಲಿಫ್ಟ್‌ನಲ್ಲಿ (Lift) ಒಂದು ಗಂಟೆ ಕಾಲ ಸಿಲುಕಿದ್ದ 9 ಜನರನ್ನು ಅಗ್ನಿಶಾಮಕ ದಳದ ತಂಡ ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್ ಹಠಾತ್ ಆಗಿ ಮೊದಲ ಮಹಡಿಯಲ್ಲಿ ನಿಂತಿತ್ತು. ಅದರಲ್ಲಿ ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಸಿಲುಕಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಒಳಗೆ ಇದ್ದರು. ಇದನ್ನೂ ಓದಿ: ಏಕಾಏಕಿ ಕುಸಿದ ಲಿಫ್ಟ್ – ಇನ್‌ಸ್ಟಾ ಮಾರ್ಟ್ ಉದ್ಯೋಗಿ ಸಾವು
ಲಿಫ್ಟ್‌ನಲ್ಲಿ ಕೆಲ ನಾಗರಿಕರು ಭಯಭೀತರಾಗಿ ಕಿರುಚಾಡಿದ್ದರು. ಅಲ್ಲದೇ ಮಹಿಳೆಯೋರ್ವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಲಿಫ್ಟ್‌ನಲ್ಲಿ ಸಿಲುಕಿದ್ದವರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈಡ್ರಾಲಿಕ್ ಟೂಲ್ಸ್ ಬಳಸಿ, ಲಿಫ್ಟ್ ಮುರಿದು ಒಳಗಿದ್ದ ಜನರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಭಾರೀ ಡಿಮ್ಯಾಂಡ್

