ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಐದನೇ ಬಾರಿಗೆ ಬಾಂಬ್ ಸ್ಫೋಟ (Bomb Blast) ಸಂಭವಿಸಿದೆ. ವೈಟ್‌ಫೀಲ್ಡ್ ಬಳಿಯ ಬ್ರೂಕ್‌ಫೀಲ್ಡ್ ಕುಂದಲನಹಳ್ಳಿ ಮುಖ್ಯರಸ್ತೆಯಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಬಾಂಬ್ ಸ್ಫೋಟ ನಡೆದಿದೆ.
ಆರಂಭದಲ್ಲಿ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿದೆ ಎಂಬ ಸುದ್ದಿ ಬಂದಿತ್ತು. ಆದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಇದು ಬಾಂಬ್ ಸ್ಫೋಟ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದನ್ನೂ ಓದಿ: ಪಾಕ್ ವಶದಲ್ಲಿದ್ದ ‘ಸಿಂಗಂ’ ವಿಂಗ್ ಕಮಾಂಡರ್ ತಾಯ್ನಾಡಿಗೆ ವಾಪಸ್ – ಭಾರತದ ಗೆಲುವಿಗೆ 5 ರ ಸಂಭ್ರಮ
Advertisement
Advertisement
ಈ ಹಿಂದೆ ಬೆಂಗಳೂರಿನಲ್ಲಿ ಯಾವಾಗ ಬಾಂಬ್ ಸ್ಫೋಟವಾಗಿತ್ತು?
2008
ಜುಲೈ 25 ರಂದು ಮಧ್ಯಾಹ್ನ ಬೆಂಗಳೂರಿನ 7 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಡಿವಾಳ ಬಸ್ ಡಿಪೋ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠಲ್ ಮಲ್ಯ ರಸ್ತೆ, ಲ್ಯಾಂಗ್‌ಫೋರ್ಡ್ ಟೌನ್, ರಿಚ್ಮಂಡ್ ಟೌನ್‌ನಲ್ಲಿ ನಡೆದಿತ್ತು.
Advertisement
Advertisement
2010
ಏಪ್ರಿಲ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯುವ ಮೊದಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಗೇಟ್ ಬಳಿ ಎರಡು ಬಾಬ್ ಸ್ಫೋಟಗೊಂಡರೆ ಒಂದು ಬಾಂಬ್ ಅನ್ನು ಕ್ರೀಡಾಂಗಣದ ಹೊರಗಡೆ ನಿಷ್ಕ್ರಿಯಗೊಳಿಸಲಾಗಿತ್ತು.
2013
ಏಪ್ರಿಲ್ 17 ರಂದು ಮಲ್ಲೇಶ್ವಂರನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದ ಬಳಿ ಸ್ಫೋಟ ಸಂಭವಿಸಿತ್ತು. ಇದನ್ನೂ ಓದಿ: Exclusive: 10 ಸೆಕೆಂಡುಗಳಲ್ಲೇ ಎರಡು ಬಾರಿ ಸ್ಫೋಟ – ರಾಮೇಶ್ವರಂ ಕೆಫೆ ಎಂಡಿ ಸ್ಫೋಟಕ ಮಾಹಿತಿ
2014
ಹೊಸ ವರ್ಷದ ಸಂಭ್ರಮಾಚರಣೆಕ್ಕೆ ಸಿದ್ದಗೊಂಡಿದ್ದ ಚರ್ಚ್ ಸ್ಟ್ರೀಟ್‌ನಲ್ಲಿ ಡಿಸೆಂಬರ್ 28 ರಂದು ಸ್ಫೋಟ ಸಂಭವಿಸಿತ್ತು. ಸುಧಾರಿತ ಸ್ಫೋಟಕ ಸಾಧನವನ್ನು ಹೂವಿನ ಕುಂಡದಲ್ಲಿ ಇರಿಸಲಾಗಿತ್ತು.