ಚೆನೈ: ಸ್ಟೆರ್‍ಲೈಟ್ ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ತಮಿಳುನಾಡಿನ ಟ್ಯುಟಿಕಾರಿನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.
ಸುಮಾರು 20 ಸಾವಿರ ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಜನರು ಪ್ರತಿಭಟನೆಗೆ ಇಳಿದಿದ್ದರು. ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪೊಲೀಸರಿಗೆ ಗೋಲಿಬಾರ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಸಚಿವ ಜಯಕುಮಾರ್ ಹೇಳಿದ್ದಾರೆ.
Advertisement
Advertisement
ಸ್ಥಳೀಯರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಸುಮಾರು ಬಾರಿ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಕಂಪೆನಿಯ 25 ವರ್ಷಗಳ ಪರವಾನಗಿ ಮುಗಿಯುವ ಹಂತದಲ್ಲಿದ್ದು, ನವೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ತಿಳಿದ ಪ್ರತಿಭಟನಾಕಾರರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಉದ್ರೇಕಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
Advertisement
ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತನಾಡಿ, ಕೆಲವು ತಿಂಗಳಿನಿಂದ ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಎಐಎಡಿಎಂಕೆ ಆಡಳಿತಾರೂಢ ಸರ್ಕಾರ ಜನರ ಅಹವಾಲನ್ನು ಪೂರೈಸುವಲ್ಲಿ ನಿರ್ಲಕ್ಷ ವಹಿಸಿದೆ. ಘಟಕವನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಈ ಹಿಂದೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸದ್ದ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರು ಕ್ರಿಮಿನಲ್ ಗಳಲ್ಲ. ಇದು ಸರ್ಕಾರದ ನಿರ್ಲಕ್ಷ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಬೆಲೆ ಕೊಡಲಿಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.
2013ರಲ್ಲಿ ನೂರಾರು ಜನ ಉಸಿರಾಟದ ತೊಂದರೆಗೀಡಾಗಿದ್ದರು. ಅನಿಲ ಸೋರಿಕೆಯಿಂದ ಬಹಳಷ್ಟು ಮಂದಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಿದ್ದಾರೆ. ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಂಪೆನಿ ಪಾಲಿಸುತ್ತಿಲ್ಲ ಹಾಗಾಗಿ ಘಟಕವನ್ನು ಮುಚ್ಚುವಂತೆ ಜನರು ಆಗ್ರಹಿಸಿದ್ದರು.
ಇದೇ ವರ್ಷ ಎಂಡಿಎಂಕೆ ಮುಖ್ಯಸ್ಥ ವೈಕೋ, ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದರು. ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಕಂಪೆನಿ ಪಾಲಿಸದೆ ಹಲವಾರು ವರ್ಷಗಳಿಂದ ಪರಿಸರವನ್ನು ಹಾಳುಮಾಡಿರುವುದಕ್ಕೆ 100 ಕೋಟಿ ದಂಡವನ್ನು ಕೋರ್ಟ್ ವಿಧಿಸಿತು. ಆ ಸಮಯದಲ್ಲಿ ವೇದಾಂತ ಸಂಸ್ಥೆಗಳ ಅಡಿಯಲ್ಲಿ ಸ್ಟೆರ್‍ಲೈಟ್ ನಡೆಯುತ್ತಿತ್ತು. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದ್ದೇವೆ ಎಂದು ಕಂಪೆನಿ ವಾದಿಸಿತ್ತು.
1996ರಲ್ಲಿ ಸ್ಟೆರ್‍ಲೈಟ್ ಕಾರ್ಯವನ್ನು ಆರಂಭಿಸಿದೆ. 1000 ಪೂರ್ಣ ಪ್ರಮಾಣದ ನೌಕರರನ್ನು, 2000 ಗುತ್ತಿಗೆ ನೌಕರರನ್ನು ಹೊಂದಿದೆ. 25 ಸಾವಿರ ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ.
#WATCH: Clash between Police & locals during the protest held in Tuticorin demanding ban on Sterlite Industries, in wake of the pollution created by them in #TamilNadu. pic.twitter.com/s5j2dH9J8o
— ANI (@ANI) May 22, 2018
Tamil Nadu CM announces compensation of Rs 10 Lakh each for those killed during protest in Tuticorin and Rs 3 Lakh each for the injured, government jobs for the family members of the deceased also announced. An inquiry commission will be set up for investigation into the incident
— ANI (@ANI) May 22, 2018