ತಿರುವನಂತಪುರಂ: ಕನಿಷ್ಠ 873 ಪೊಲೀಸ್ ಅಧಿಕಾರಿಗಳು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(NIA) ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ ವರದಿಯಲ್ಲಿ ಹೇಳಿದೆ.
ಸಬ್ ಇನ್ಸ್‌ಪೆಕ್ಟರ್, ಸ್ಟೇಷನ್ ಹೆಡ್ ಆಫೀಸ್ ಶ್ರೇಣಿ ಮತ್ತು ಸಿವಿಲ್ ಪೊಲೀಸರ ಮೇಲೆ ಈಗ ಎನ್‌ಐಎ ಕಣ್ಣಿಟ್ಟಿದೆ. ಪಿಎಫ್‌ಐ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಐಎಗೆ ಅಧಿಕಾರಿಗಳು ಹಣಕಾಸಿನ ವ್ಯವಹಾರ ನಡೆಸಿದ ಮಾಹಿತಿ ಲಭ್ಯವಾದ ಬೆನ್ನಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದನ್ನೂ ಓದಿ: PFI ಮೊಬೈಲ್ ರಿಟ್ರೀವ್ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್
Advertisement
Advertisement
ಸ್ಪೆಷಲ್ ಬ್ರ್ಯಾಂಚ್, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜೊತೆ ಪಿಎಫ್‌ಐಗೆ ನಂಟಿತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ಮಾಹಿತಿ ಸೋರಿಕೆ ಮಾಡಿದ ಆರೋಪ ಈ ಪೊಲೀಸರ ಮೇಲಿದೆ. ಪಿಎಫ್‌ಐ ಮೇಲೆ ದಾಳಿಗೂ ಮೊದಲೇ ದಾಳಿ ನಡೆಸುವ ವಿಚಾರ ಸೋರಿಕೆಯಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI
Advertisement
ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ವಿವರವನ್ನು ಪಿಎಫ್‌ಐಗೆ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಇಡುಕ್ಕಿಯ ತೊಡುಪುಳದ ಸಿವಿಲ್ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ಮುನ್ನಾರ್ ಪೊಲೀಸ್ ಠಾಣೆಯ ಎಸ್‌ಐ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಲಾಗಿತ್ತು.