ಬೆಂಗಳೂರು: ರಾಜ್ಯದ ಕೆಲವೆಡೆ ಅತೀವೃಷ್ಟಿ, ಬಹುತೇಕ ಕಡೆ ಅನಾವೃಷ್ಟಿ. ಮುಂಗಾರು ಮಳೆ ಜೊತೆಗೆ ಹಿಂಗಾರು ಮಳೆಯೂ ಕೈಕೊಟ್ಟ ಪರಿಣಾಮ 23 ಜಿಲ್ಲೆಗಳ 86 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಮಲೆನಾಡು, ಕರಾವಳಿ ಭಾಗ ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮಳೆ ಕೊರತೆ ಉಂಟಾಗಿದೆ.
ಕೇಂದ್ರ ಸರ್ಕಾರ ನಿಗದಿ ಮಾಡಿದ ಮಾನದಂಡಗಳ ಅನುಸಾರ 86 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಅಂತಾ ಘೋಷಿಸಿದೆ. ಸಚಿವ ದೇಶಪಾಂಡೆ ನೇತೃತ್ವದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬರದಿಂದಾಗಿ ಸುಮಾರು 8 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಒಣಗಿ ಹೋಗಿದೆ.
Advertisement
Advertisement
ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೆಂದು ತುರ್ತಾಗಿ 43 ಕೋಟಿ ರೂಪಾಯಿ. ಜಾನುವಾರುಗಳ ಮೇವಿಗೆಂದು ಸರ್ಕಾರ 15 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ನಡುವೆ ರಾಜ್ಯದ ಅತೀವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ ಅಧ್ಯಯನ ನಡೆಸಲು ಇಂದು ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸುತ್ತಿದೆ.
Advertisement
ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ತಾಲೂಕುಗಳು ಬರಪೀಡಿತ ಪಟ್ಟಿ ಇಲ್ಲಿದೆ
Advertisement
* ಬೆಂಗಳೂರು ಗ್ರಾಮಾಂತರ – 1, ರಾಮನಗರ -2, ಕೋಲಾರ – 6
* ಚಿಕ್ಕಬಳ್ಳಾಪುರ – 6, ತುಮಕೂರು – 9, ಚಿತ್ರದುರ್ಗ – 4
* ದಾವಣಗೆರೆ – 2, ಚಾಮರಾಜನಗರ – 2, ಮಂಡ್ಯ – 5
* ಬಳ್ಳಾರಿ – 6, ಕೊಪ್ಪಳ- 4, ರಾಯಚೂರು – 5
* ಕಲಬುರ್ಗಿ – 6, ಯಾದಗಿರಿ -3, ಬೀದರ್ – 2
* ಬೆಳಗಾವಿ – 2, ಬಾಗಲಕೋಟೆ – 4, ವಿಜಯಪುರ – 5
* ಗದಗ – 5, ಹಾವೇರಿ – 1, ಧಾರವಾಡ – 2
* ಹಾಸನ – 3, ಚಿಕ್ಕಮಗಳೂರು – 1
ಮಂಗಳವಾರ ಸಂಜೆ ಮೈಸೂರು, ಕೊಡಗು, ಹಾಸನ, ಮಂಡ್ಯ, ತುಮಕೂರು, ನೆಲಮಂಗಲ ಸೇರಿ ರಾಜ್ಯದ ಹಲವೆಡೆ ಗುಡುಗು ಸಿಲಿಡಿಲು ಸಹಿತ ಮಳೆ ಆಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಗರುಗುಂಟೆಯಲ್ಲಿ ಸಿಡಿಲು ಬಡಿದು ನವೀನ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ತಾಲೂಕಿನ ಗುಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದು ಹಸು, ಕೋತಿ ಸಾವನ್ನಪ್ಪಿದೆ.
ಮೈಸೂರಲ್ಲಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಮಹಾರಾಣಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಳೆಯಲ್ಲೇ ವಿದ್ಯಾರ್ಥಿಗಳು ಸಿಎಂ ಭಾಷಣ ಆಲಿಸಿದರು. ಮಂಡ್ಯ, ಹಾಸನದಲ್ಲಿ ಬಿದ್ದ ಮಳೆಯಿಂದ ರೈತ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾನೆ. ಕೊಡಗು ಜಿಲ್ಲೆಯ ಮಕ್ಕಂದೂರು, ನಾಪೋಕ್ಲು ಸೇರಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv